ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲೆ ಬರಗಾಲ ಪೀಡಿತವೆಂದು ಘೋಷಿಸಿ

Lingaraj Badiger
Updated On : 16 Aug 2013, 11:53 am

ಕನ್ನಡಪ್ರಭ ವಾರ್ತೆ, ಗದಗ, ಆ. 15
ರಾಜ್ಯ ಸರ್ಕಾರ ಗದಗ ಜಿಲ್ಲೆಯನ್ನು ಕೂಡಲೇ ಬರಗಾಲಪೀಡಿತವೆಂದು ಘೋಷಿಸಿ ಬರಗಾಲ ಕಾಮಗಾರಿ ಆರಂಭಿಸಬೇಕು. ಸಂಕಷ್ಟದಲ್ಲಿರುವ ರೈತರ ಸಂಕಷ್ಟಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಪಿ.ಸುಬ್ರಮಣ್ಯಂ ರಡ್ಡಿ ಒತ್ತಾಯಿಸಿದರು.
ಅವರು ಗುರುವಾರ ಹುಬ್ಬಳ್ಳಿ ರಸ್ತೆಯಲ್ಲಿರುವ ನವಕರ್ನಾಟಕ ಅಭಿವೃದ್ಧಿ ವೇದಿಕೆ ಕಚೇರಿಯಲ್ಲಿ 67ನೇ ಸ್ವಾತಂತ್ರೋತ್ಸವದಲ್ಲಿ    ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗದಗ ಜಿಲ್ಲೆಯ ವಿವಿಧೆಡೆ ನಿರೀಕ್ಷಿತ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಅಲ್ಲಲ್ಲಿ ಜೀವ ಹಿಡಿದಿರುವ ಬೆಳೆ ಮೊಳಕೆಯೊಡೆದು ಚಿಗುರುವ ಮೊದಲೇ ಚಿಗರೆ, ಜಿಂಕೆಗಳ ಹಾವಳಿಗೆ ನಾಶವಾಗುತ್ತಿದ್ದರೂ ಅರಣ್ಯ ಇಲಾಖೆ ರೈತರ ಬವಣೆಗೆ ಜಾಣ ಕುರುಡು ನೀತಿ ಅನುಸರಿಸುತ್ತಿರುವುದು ಖಂಡನೀಯ. ಅರಣ್ಯ ಇಲಾಖೆಯವರು ರೈತರು ಬೆಳೆದ ಬೆಳೆಗಳನ್ನು ನಾಶಮಾಡುತ್ತಿರುವ ಚಿಗರೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ಅಮರೇಶ ಬೂದಿಹಾಳ, ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ಐ. ಮುಳಗುಂದ ಮುಂತಾದವರು ಮಾತನಾಡಿದರು. ವೇದಿಕೆಯ ರಾಜ್ಯ ವಕ್ತಾರ ರಾಜಶೇಖರ ಕಾತರಕಿ, ರಾಜ್ಯ ಮಹಿಳಾ ಅಧ್ಯಕ್ಷೆ ರೇಣುಕಾ ನಾಯ್ಕರ, ಅಬ್ದುಲ್ ಖಾದರ ಗಡಾದ, ಆಕ್ಬರ ಅಲಿ ಬೇಗ್, ಎಂ.ಎಸ್. ಪರ್ವತಗೌಡ್ರ, ನಿಸ್ಸಾರಅಹ್ಮದ ಖಾಜಿ, ಬಸವರಾಜ ಉಪನಾಳ, ಸಮೀರ ಉಕ್ಕಲಿ, ಪರಶುರಾಮ ಸಾತಪುತೆ, ರಾಮಣ್ಣ ಬಳ್ಳಾರಿ, ಲಕ್ಷ್ಮಣ ಹಳ್ಳಿಕೇರಿ, ಶೋಭಾ ಕೋಪಣ್ಣವರ, ಲೀಲಾವತಿ ಚಿತ್ರಗಾರ, ಉಷಾದೇವಿ ಶಾಂತಸ್ವಾಮಿಮಠ ಮುಂತಾದವರು ಇದ್ದರು. ವೇದಿಕೆ ರಾಜ್ಯ ಕಾರ್ಯದರ್ಶಿ ಎನ್.ಕೆ. ಕೊರ್ಲಹಳ್ಳಿ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement