ಸಂಪತ್ತು ವೃದ್ಧಿಗೆ ರೈತರ ಏಳ್ಗೆ ಅಗತ್ಯ
ಕನ್ನಡಪ್ರಭ ವಾರ್ತೆ, ರೋಣ, ಆ. 15
ಕೃಷಿ ಕ್ಷೇತ್ರ ಪ್ರಗತಿಯಾದಲ್ಲಿ ರಾಷ್ಟ್ರದ ಸಂಪತ್ತು ವೃದ್ಧಿಯಾಗುತ್ತದೆ. ಆ ದಿಶೆಯಲ್ಲಿ ಸರ್ಕಾರದಿಂದ ರೈತರಿಗೆ ಸೀಗಬೇಕಾದ ಕೃಷಿ ಸೌಲತ್ತುಗಳು ಸಮರ್ಪಕವಾಗಿ ತಲುಪುವಂತಾಗಬೇಕು ಎಂದು ತಹಸೀಲ್ದಾರ್ ಎಂ.ಬಿ. ಪಾಟೀಲ ಹೇಳಿದರು.
ಅವರು ಗುರುವಾರ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಾತಿ, ಮಥ, ಪಂಥಗಳ ತಾರತಮ್ಯ ಕೈಬಿಟ್ಟು ಪರಸ್ಪರ ಭಾತೃತ್ವತೆ, ಸಾಮರಸ್ಯತೆ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ತಾಪಂ ಸದಸ್ಯೆ ಗಾಯತ್ರಿ ನಾಗನೂರ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು, ಸ್ವಾತಂತ್ರ್ಯ ಹೋರಟಗಾರ ವಿರೂಪಾಕ್ಷಯ್ಯ ಪೂಜಾರ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಟ್ಟಣದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪತಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ಅವಘಡದಿಂದ ಪಾರಾಗುವ ಕುರಿತು ಪ್ರಾತ್ಯಕ್ಷಿಕೆ ಜರುಗಿತು. ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಸದಸ್ಯ ಮಾಲಾಬಿ ಗಡಾದ, ರೇಣುಕಾ ಹಟ್ಟಿಮನಿ, ಸಿಪಿಐ ಮಲ್ಲನಗೌಡ ನಾಯಕ, ಉಪ ತಹಸೀಲ್ದಾರ್ ಎನ್.ಎಸ್. ಕೂಡಲ, ಪ್ರಶಾಂತ ವರಗಪ್ಪನವರ, ಎಂ.ಬಿ. ತೋಗುಣಸಿ, ಎಸ್.ಎ. ಸೂಡಿಶೆಟ್ಟರ್, ತಾಪಂ ಪ್ರಭಾರಿ ಇಒ ನಾರಾಯಣ, ಸಿಡಿಪಿಒ ಕೆಂಪಹನಮಯ್ಯ, ಎಸ್.ಆರ್. ದೊಡ್ಡಮನಿ, ಎಂ.ಪ್ರಸಾದಕುಮಾರ, ಎಚ್.ಬಿ. ಹುಲಗನ್ನವರ, ವೀರಣ್ಣ ಅಡಗತ್ತಿ, ಎ.ಬಿ. ಹೊನ್ನವಾಡ ಸೇರಿದಂತೆ ಮುಂತಾದವರು ಇದ್ದರು. ಪಿ.ಎಚ್. ಕಡಿವಾಲ ಸ್ವಾಗತಿಸಿದರು. ಎಸ್.ವೈ. ಯಡಳ್ಳಿ ನಿರೂಪಿಸಿದರು.