ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ವತೋಮುಖ ಪ್ರಗತಿಗೆ ಶ್ರಮಿಸಿ

Lingaraj Badiger
Updated On : 16 Aug 2013, 11:45 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 15  
ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ನಮ್ಮ ಯುವಶಕ್ತಿ, ವಿದ್ಯಾರ್ಥಿಗಳು ದೇಶಭಕ್ತಿ, ನಿಷ್ಠೆ, ಶಿಸ್ತು, ಕರ್ತವ್ಯ, ಪ್ರಜ್ಞೆ, ವಿಶ್ವಾಸ ಹಾಗೂ ಸ್ವಾವಲಂಬನೆಯಂತಹ ವಿಶೇಷ ಗುಣ ರೂಢಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಆರ್.ಡಿ. ಉಪ್ಪಿನ ಕರೆ ನೀಡಿದರು.
ಅವರು ಗುರುವಾರ ಪಟ್ಟಣದ ಕಂದಾಯ ಇಲಾಖೆ ಸಂಕಿರ್ಣದ ತಾಲೂಕು ಕಚೇರಿ ಶಿರಹಟ್ಟಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಜಾತಿ, ಭಾಷೆ, ಗಡಿ ತಂಟೆ, ಭಯೋತ್ಪಾದನೆ ದೇಶದಲ್ಲಿ ತಾಂಡವಾಡುತ್ತಿದ್ದು, ಇದರ ಸಂಪೂರ್ಣ ನಿರ್ಮೂಲನೆಗಾಗಿ ಜಾತಿ ಭೇದ-ಮಾರ್ಗಭೇದವನ್ನು ಮರೆತು ಹೋರಾಡಬೇಕಾಗಿದೆ. ಭವ್ಯ ಭಾರತ ಕಟ್ಟಲು ಏಕತೆ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ದೇಶದ ಅಭಿವೃದ್ಧಿ ನಮ್ಮ ಯುವ ಪೀಳಿಗೆಯನ್ನು ಅವಲಂಭಿಸಿದೆ. ಯುವಜನರನ್ನು ಆರೋಗ್ಯವಂತ, ವಿಚಾರವಂತ ಹಾಗೂ ನೀತಿವಂತರನ್ನಾಗಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಪಪಂ ಸದಸ್ಯ ಹುಮಾಯೂನ ಮಾಗಡಿ, ಚಾಂದಸಾಬ ಮುಳಗುಂದ, ಗೂಳಪ್ಪ ಕರಿಗಾರ, ಸಂತೋಷ ಕುರಿ, ಬುಡನಶ್ಯಾ ಮಕಾನದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಸಿಪಿಐ ಪ್ರಕಾಶ ನಾಯ್ಡು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ, ಪ್ರಕಾಶ ಹಡಗಲಿ, ಎಂ.ಕೆ. ಹಿರೇಮಠ, ಎಸ್.ಕೆ.  ಹೊನ್ನೇಗೌಡರ, ಬಿ.ಎನ್. ರಾಟಿ, ಎಲ್.ವೈ. ಮಾಳುದೆ ಮುಂತಾದವರು ಇದ್ದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನಡೆದವು. ಬಿ.ಎಸ್. ಕೋರಿಶೆಟ್ಟರ ಸ್ವಾಗತಿಸಿದರು. ಶಿಕ್ಷಕ ಎಂ.ಕೆ. ಲಮಾಣಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement