ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 15
ಸ್ವಾತಂತ್ರ್ಯವೆಂದರೆ ಕೇವಲ ಸ್ವೇಚ್ಛಾಚಾರವಲ್ಲ, ಅದು ದೇಶಾಭಿಮಾನದ ಪ್ರತೀಕ ಎಂದು ಪಟ್ಟಣದ ಉಪತಹಸೀಲ್ದಾರ್ ಮೋಹನ ಕಟ್ಟಿಮನಿ ಅಭಿಪ್ರಾಯ ಪಟ್ಟರು.
ಅವರು ಗುರುವಾರ ಪಟ್ಟಣದ ಪುರಸಭೆಯ ಆವರಣದಲ್ಲಿ ಜರುಗಿದ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯ ಪಾಲಿಸುವುದೇ ನಿಜವಾದ ಸ್ವಾತಂತ್ರ್ಯ ದಿನಾಚರಣೆಯಾಗಿದೆ ಎಂದರು.
ಪಟ್ಟಣದ ಡಿವೈಎಸ್‌ಪಿ ಬಿ.ಎಸ್. ನೇಮಗೌಡ ಮಾತನಾಡಿ, ಸ್ವಾತಂತ್ರ್ಯದ ಮಹತ್ವವನ್ನು ನಾವೆಲ್ಲ ಹಗುರಾಗಿ ಕಾಣಬಾರದು ಎಂದರು. ಪ್ರೊ. ಐ.ಸಿ. ದರಣಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ ಮಾತನಾಡಿದರು. ಪುರಸಭೆ ಸದಸ್ಯರು ಇದ್ದರು.
ಸಿಟಿ ಸರ್ವೇ ಕಚೇರಿ: ಪಟ್ಟಣದ ಸಿಟಿ ಸರ್ವೇ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಡಾ. ಜಿ.ಎಸ್. ಕೋಟಿಮಠ ಧ್ವಜಾರೋಹಣ ನೆರವೇರಿಸಿದರು. ಭೂಮಾಪನಾಧಿಕಾರಿ ಸುರೇಶ ಪೂಜಾರ, ನಿವೃತ್ತ ಸೈನಿಕ ವಿ.ಎಸ್. ಹಿರೇಮಠ, ಸಿ.ಎಸ್. ಹಿರೇಮಠ, ಪಿ.ಬಿ. ಮಾತಾಡೆ. ಎ.ಕೆ. ಅಂಬೇಕರ್, ಮಾರುತಿ ಬಟ್ಟೂರ, ಬಿ.ದುರಗಪ್ಪ, ಬಿ.ಎಫ್. ಉಪ್ಪಾರ, ಯಲ್ಲಪ್ಪ ಮಡಿವಾಳರ. ಮಲ್ಲೂರ, ಶಿವಜೋಗೆಪ್ಪ ಚಂದರಗಿ ಮುಂತಾದವರು ಇದ್ದರು. ಪಟ್ಟಣದ ವಿವಿಧ ಶಾಲಾ ಕಾಲೇಜು, ಗಾಂಧಿ ಮಂದಿರದಲ್ಲಿ, ಅಗ್ನಿಶಾಮಕ ಠಾಣೆಯಲ್ಲಿ ನಾಡಕಚೇರಿಯಲ್ಲಿ, ಕಿತ್ತೂರರಾಣಿ ಚನ್ನಮ್ಮ ವೃತ್ತ ಸೇರಿದಂತೆ ಪಟ್ಟಣದ ಮುಂತಾದ ಕಡೆಗಳಲ್ಲಿ ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.