ಹೊಳೆಆಲೂರಲ್ಲಿ ಸ್ವಾತಂತ್ರ್ಯ ದಿನಾಚರಣೆ
ಹೊಳೆಆಲೂರು: ಇಲ್ಲಿನ ಗ್ರಾಪಂ ಆವರಣದಲ್ಲಿ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಗ್ರಾಪಂ ಪಿಡಿಒ ಎ.ಎಸ್. ಬಳಗೋಡ ನೆರವೇರಿಸಿದರು. ಅಧ್ಯಕ್ಷೆ ಬಸಮ್ಮ ವಸ್ತ್ರದ, ಉಪಾಧ್ಯಕ್ಷ ಜಗದೀಶ ಬ್ಯಾಡಗಿ ಗ್ರಾಪಂ ಸರ್ವಸದಸ್ಯರು, ಗ್ರಾಮದ ಎಲ್ಲ ಶಾಲಾ ಮಕ್ಕಳು, ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಗಣ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಸಂಕನಗೌಡರ ಸ್ವಾಗತದೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕಲ್ಮೇಶ್ವರ ಕಾಲೇಜು: ಸ್ಥಳೀಯ ಶ್ರೀ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಡಳಿತ ಮಂಡಳಿ ಸದಸ್ಯ ಮಹಾಂತೇಶ ಬ್ಯಾಡಗಿ 67ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದರು. ಪ್ರೊ. ಎಸ್.ಎಸ್. ಹುರಕಡ್ಲಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಎಂ.ಬಿ. ಕೋಳೇರಿ, ಅಧ್ಯಕ್ಷ ಸಿ.ಜಿ. ಬೀರನೂರ, ಸದಸ್ಯ ಬಿ.ಬಿ. ಸಾಸಳ್ಳಿ, ಎಂ.ಎನ್. ತೇಜಿಗೌಡ್ರ ಇದ್ದರು. ದೈಹಿಕ ನಿರ್ದೇಶಕ ಎ.ಎಸ್. ಪಾಟೀಲ ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್. ಕಡಪಟ್ಟಿ ಸ್ವಾಗತಿಸಿದರು. ನೂರಜಹಾನ ನೀಲಗುಂದ ವಂದಿಸಿದರು. ಪ್ರೊ. ಹುಣಸೀಕಟ್ಟಿ ನಿರೂಪಿಸಿದರು. ಶ್ರೀ ಕಲ್ಮೇಶ್ವರ ಐಟಿಐ ಕಾಲೇಜುನಲ್ಲಿ ಧ್ವಜಾರೋಹಣವನ್ನು ಸಂಸ್ಥೆಯ ಉಪಾಧ್ಯಕ್ಷ ಎಂ.ಬಿ. ಕೋಳೇರಿ ನೆರವೇರಿಸಿದರು. ಅಧ್ಯಕ್ಷ ಸಿ.ಜಿ. ಬೀರನೂರ, ಸದಸ್ಯರಾದ ಬಿ.ಬಿ. ಸಾಸಳ್ಳಿ, ಎಂ.ಎನ್. ತೇಜಿಗೌಡ್ರ, ಮಹಾಂತೇಶ ಬ್ಯಾಡಗಿ ಆಗಮಿಸಿದ್ದರು. ಚೇತನಾ ಉಪ್ಪಿನ ಸ್ವಾಗತಿಸಿದರು. ಪ್ರಾ. ಎ.ಎಂ. ಬಳ್ಳಾರಿ ವಂದಿಸಿದರು. ಕಾ.ಯು. ಖಾಜಿ ನಿರೂಪಿಸಿದರು. ಇ.ಜಿ. ಆಲೂರ, ಎಂ.ಬಿ. ನಾಗರಾಳ, ಆರ್.ಬಿ. ನಾಯಕ, ವಿದ್ಯಾರ್ಥಿ ಬಳಗ ಮತ್ತು ಪ್ರಮುಖರು ಪಾಲ್ಗೊಂಡಿದ್ದರು.
ಶ್ರೀಯಚ್ಚರೇಶ್ವರ ಪ್ರೌಢ ಶಾಲೆ: ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ 67ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕ ಸಿ.ಎ. ಮಠಪತಿ, ಎನ್.ಎಂ. ಮುಲ್ಲಾ, ಪಾಂಡುರಂಗ ಪತ್ತಾರ, ಶ್ರೀಶೈಲ ಬದಾಮಿ, ಬಿ.ಕೆ. ಕುಲಕರ್ಣಿ, ಕೆ.ಸಿ. ಪಾಟೀಲ, ಮಹೇಶ ಐವಳ್ಳಿ, ಎಚ್.ಕೆ. ಪಟೇಲ, ಶ್ರೀಪತಿ ಉಡುಪಿ, ಎಂ.ಎನ್. ಪಾಯಪ್ಪಗೌಡರ, ಬಿ.ಆರ್. ಬಡಿಗೇರ ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಬಿ.ಎಫ್. ಬಾಲನಗೌಡರ ಸ್ವಾಗತಿಸಿದರು. ಆರ್.ಕೆ. ಚವ್ಹಾಣ ವಂದಿಸಿದರು. ಎ.ಎಂ.ಸಿಂದಗಿ ನಿರೂಪಿಸಿದರು.
ರಾಷ್ಟ್ರೀಯ ನಿರ್ಮಾಣ ರತ್ನ ಪ್ರಶಸ್ತಿಗೆ ಆಯ್ಕೆ
ಗದಗ: ನಗರದ ಯಂಗ್ ಇಂಡಿಯಾ ಗ್ರುಪ್ ಆಫ್ ಕಂಪನಿಸ್ ಸಂಸ್ಥಾಪಕ ಚೇರಮನ್ ವಿ.ಆರ್. ಗೋವಿಂದಗೌಡ್ರ ಅವರನ್ನು ನವದೆಹಲಿಯ ಆರ್ಥಿಕ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ದಿ ಎಕನಾಮಿಕ್ ಆಂಡ್ ಹುಮನ್ ರಿಸೋರ್ಸ್ ಡೆವಲಪ್ಮೆಂಟ್ ಅಸೋಸಿಯೇಷನ್) ನೀಡುವ ರಾಷ್ಟ್ರೀಯ ನಿರ್ಮಾಣ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.