ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಾರತ ಜಗತ್ತಿಗೆ ಗುರುವಾಗುವ ಕಾಲ ಸನ್ನಿಹಿತ

Vishwanath S
Updated On : 17 Aug 2013, 10:56 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಆ. 16
ಜಗತ್ತಿಗೆ ಭಾರತವೇ ಗುರುವಾಗುವ ಕಾಲ ಸನ್ನಿಹಿತವಾಗುತ್ತಿದೆ. ಭಾರತದ ಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳೆಲ್ಲವನ್ನೂ ವಿದೇಶಿಯರು ಅನುಸರಿಸುತ್ತಿದ್ದು, ನಾವುಗಳು ಜಗತ್ತಿನ ಸಾಂಸ್ಕೃತಿಕ ರಾಯಭಾರಿಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಕ್ತಾರ ಹನುಮಂತ ಮಳಲಿ ಹೇಳಿದರು. ಅವರು ಗುರುವಾರ ಮಧ್ಯರಾತ್ರಿ ಪಟ್ಟಣದ ಗಜಾನನ ಮಂದಿರದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಭಾರತ ದೇಶ ಜನ್ಮ ತಾಳಿ ಇಂದಿಗೆ 1972 ಕೋಟಿ ವರ್ಷಗಳಾದವು. ಅಂದಿನಿಂದಲೂ ಇಂದಿಗೂ ನಮ್ಮ ದೇಶದ ಹಿರಿಮೆ ಗರಿಮೆಗಳು ಜಗತ್ತಿನ ಯಾವ ದೇಶಕ್ಕಿಂತಲೂ ಮೇಲ್ಮಟ್ಟದಲ್ಲಿರುವುದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿದ ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿದರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಪಾಲಾಕ್ಷಯ್ಯ ಅರಳೆಲೆಮಠ, ಶ್ರೀಶೈಲ ಪಾದಯಾತ್ರಾ ಸಂಘದ ಬಸವಣ್ಣೆಮ್ಮ ಪುರ್ತಗೇರಿ, ಪಪಂನ ಕಾರ್ಮಿಕ ಹುಲಿಗೆಮ್ಮ ಪಾದಗಟ್ಟಿ ಮತ್ತು ಯಮನವ್ವ ಪೂಜಾರ, ವೀರೇಶ್ವರ ಭಜನಾ ಮಂಡಳಿ ಮತ್ತು ಕಟ್ಟಿ ಬಸವೇಶ್ವರ ಭಜನಾ ಮಂಡಳಿ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಎಲ್.ಜಿ. ಗ್ರಾಮಪುರೋಹಿತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ ಮತ್ತು ಪಿಎಲ್‌ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಬಸನಗೌಡ ಬಿಷ್ಟನಗೌಡ್ರ ಪಾಲ್ಗೊಂಡಿದ್ದರು. ಉಪನ್ಯಾಸಕ ಶಿವಾನಂದ ಗೋಗೇರಿ ಸ್ವಾಗತಿಸಿದರು. ಪ್ರಭುಸ್ವಾಮಿ ಅರವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪೂರ್ಣಿಮಾ ಅಂಗಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement