ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿಯಲ್ಲಿ ಹೋಟೆಲ್ ಕಾರ್ಮಿಕನಿಂದ ಧ್ವಜಾರೋಹಣ

Vishwanath S
Updated On : 17 Aug 2013, 10:56 am

ಮುಂಡರಗಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಕನ್ನಡ ಸಂಘದ ಸದಸ್ಯರು ಇಲ್ಲಿನ ಬೃಂದಾವನ ಹೋಟೆಲ್ ಬಳಿಯ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿರುವ ಧ್ವಜಾರೋಹಣವನ್ನು ಪ್ರತಿವರ್ಷ ಸಾಮಾನ್ಯ ಜನರಿಂದ ನೆರವೇರಿಸುವ ಪದ್ಧತಿ ಹಾಕಿಕೊಂಡಿದ್ದಾರೆ. ಈ ಬಾರಿಯ 67ನೇ ಸ್ವಾತಂತ್ರ್ಯೋತ್ಸವದಂದು ಹೋಟೆಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕ (ಸಪ್ಲಾಯರ್)್ಕೆಂಚಪ್ಪ ಜೋಗಿನ ಅವರಿಂದ ಧ್ವಜಾರೋಹಣ ಮಾಡಿಸಿದ್ದು ವಿಶೇಷವಾಗಿತ್ತು. ಕೆಂಚಪ್ಪ ಜೋಗಿನ ಇಲ್ಲಿಯ ಬೃಂದಾವನ ಹೋಟೆಲ್‌ನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸಪ್ಲಾಯರ್ ಕೆಲಸ ನಿರ್ವಹಿಸುತ್ತಿದ್ದಾನೆ.
ಸಿದ್ದಪ್ಪ ಮ್ಯಾಗೇರಿ, ಪಾಲಾಕ್ಷಿ ಗಣದಿನ್ನಿ, ವೀರಣ್ಣ ತುಪ್ಪದ, ಆನಂದಗೌಡ ಪಾಟೀಲ, ಆನಂದ ರಾಮೇನಹಳ್ಳಿ, ನಾಗೇಶ ಹುಬ್ಬಳ್ಳಿ, ವೀರಣ್ಣ ಹುಲ್ಲೂರ, ಗೋವಿಂದ ಕರ್ನೂಲ, ಮುತ್ತಣ್ಣ ಹಾಳಕೇರಿ, ನಾಗನಗೌಡ ಪಾಟೀಲ, ವೆಂಕಟೇಶ ತೋಟದ, ಸಿದ್ದಪ್ಪ ದೊಡ್ಡಮನಿ, ಮಾರುತಿ ಯಾವಗಲ್ಲ, ಸುರೇಶ ಮೂಲಿಮನಿ, ಅಶೋಕ ನಂಜಪ್ಪನವರ, ಇಮಾಮಸಾಬ್ ನಶ್ಯಕ್ಕನವರ ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement