ಎಚ್.ಕೆ. ಪಾಟೀಲ ಹುಟ್ಟುಹಬ್ಬ: ಸಿಹಿ ಹಂಚಿ ಸಂಭ್ರಮ
ಮುಳಗುಂದ: ಗದಗ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರ 60ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರು ಸಮೀಪದ ಚಿಂಚಲಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಬೋವಿ ವಡ್ಡರ ಸಂಘದ ಮುಖಂಡರು, ಪಕ್ಷದ ಕಾರ್ಯಕರ್ತರು ಪರಸ್ಪರರಲ್ಲಿ ಸಿಹಿ ಹಂಚಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಧ್ಯಕ್ಷ ಯಲ್ಲಪ್ಪ ದುರಗಪ್ಪ ಪೂಜಾರ, ಸಣ್ಣ ಹನಮಂತಪ್ಪ ಪೂಜಾರ, ದುರಗಪ್ಪ ಪೂಜಾರ, ಬಸವಂತಪ್ಪ ಬಂಡಿವಡ್ಡರ, ದುರಗಪ್ಪ ಸಂಕದಾಳ, ದುರಗಪ್ಪ ಸಾಲಿ, ಚನ್ನಪ್ಪ ಹೊಸಮನಿ ಹಾಗೂ ಬೋವಿ ಸಮಾಜದ ಸದಸ್ಯರು ಪಾಲ್ಗೊಡಿದ್ದರು.