ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೇಶದ ಇತಿಹಾಸ ತಿಳಿಯಿರಿ: ಕುಲಕರ್ಣಿ

Mainashree
Updated On : 18 Aug 2013, 11:54 am

ನರೇಗಲ್ಲ: ಪ್ರತಿಯೊಂದು ದೇಶಕ್ಕೂ ತನ್ನದೆ ಆದ ಇತಿಹಾಸವಿದೆ. ಭಾರತ ದೇಶದ ಇತಿಹಾಸ ಜಗತ್ತಿನ ಎಲ್ಲ ದೇಶಗಳ ಇತಿಹಾಸಕ್ಕಿಂತ ವಿಶಿಷ್ಠವಾಗಿದ್ದು ಅದನ್ನು ನೀವುಗಳೆಲ್ಲ ಅರಿಯಬೇಕೆಂದು ಕೋಟುಮಚಗಿಯ ಸೋಮೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ವಿ. ಕುಲಕರ್ಣಿ ಹೇಳಿದರು.
ಅವರು ಈಚೆಗೆ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಶರಣಪ್ಪ ಹಂಚಿನಾಳ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ. ರಮಾಣಿ, ಅಡಳಿತ ಮಂಡಳಿ ಸದಸ್ಯ ಎಂ.ಆರ್. ಕಿತ್ತೂರ, ಸಂಸ್ಥೆಯ ಆಡಳಿತಾಧಿಕಾರಿ ಕೆ.ಎ. ಹಮ್ಮಿಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತೋಟಯ್ಯ ಹಿರೇಮಠ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮುಡಿಯಮ್ಮ ಜಗ್ಗಲ, ಬಿ.ಕೆ. ಗಾಣಿಗೇರ ಇದ್ದರು. ವಿ.ಎಸ್. ಚಲವಾದಿ ನಿರೂಪಿಸಿದರು. ಎಸ್.ಎಸ್. ಶಿವಪ್ಪಯ್ಯನಮಠ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಹಾಡು-ಭಾಷಣ ಮುಂತಾದ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ಎನ್.ವಿ. ಸಜ್ಜನರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement