ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೆಳ್ಳಿ ರಥೋತ್ಸವ, ಸನ್ಮಾನ ಸಮಾರಂಭ

Mainashree
Updated On : 18 Aug 2013, 11:54 am

ನರೇಗಲ್ಲ: ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಆ. 18ರ ಬೆಳಗ್ಗೆ 7 ದಿನಗಳಿಂದ ನಡೆದುಕೊಂಡು ಬಂದಿದ್ದ ಸಪ್ತಾಹ ಭಜನೆ ಮಹಾಮಂಗಲ ನಡೆಯಲಿದೆ. 10 ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಶಿವಬಸವ ಮಹಾಸ್ವಾಮಿಗಳು ನೆರವೇರಿಸುವರು. ಮಧ್ಯಾಹ್ನ 1 ಗಂಟೆಗೆ ಮಹಾಗಣರಾಧನೆ ಹಾಗೂ ಸಂಜೆ 7ಕ್ಕೆ ಪುಣ್ಯಸ್ಮರಣೋತ್ಸವ ಜರುಗಲಿದೆ. ಪುಣ್ಯಸ್ಮರಣೋತ್ಸವದ ಸಾನ್ನಿಧ್ಯವನ್ನು ಒಳಬಳ್ಳಾರಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಗರಗನಾಗಲಾಪುರ ಒಪ್ಪತೇಶ್ವರ ಮಠದ ಮರಿಮಹಾಂತ ಮಹಾಸ್ವಾಮಿಗಳು ವಹಿಸುವರು. ನೇತೃತ್ವವನ್ನು ಯಲಬುರ್ಗಿಯ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ಸಮ್ಮುಖವನ್ನು ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನಮಠದ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು ಹಾಗೂ ಮೂಡಿ ಶಿವಲಿಂಗ ಮಹಾಸ್ವಾಮಿಗಳು ವಹಿಸುವರು. ಆ. 19ರ ಬೆಳಗ್ಗೆ 11 ಗಂಟೆಗೆ 101 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಸಂಜೆ 6 ಗಂಟೆಗೆ ಬೆಳ್ಳಿ ರಥೋತ್ಸವ ಹಾಗೂ 7 ಕ್ಕೆ ಅಕ್ಕಮಹಾದೇವಿ ಸಭಾ ಮಂಟಪ, ಶಿವಶರಣಿ ನೀಲಾಂಬಿಕೆ ವೇದಿಕೆಯಲ್ಲಿ ನಾಡಿನ ಧಾರ್ಮಿಕ ಪರಂಪರೆ ಸಂಸ್ಕೃತಿಗಳ ಘೋಷಣೆ ಹಾಗೂ ಸಂವರ್ಧನೆಗಾಗಿ ಸಮರ್ಪಣಾ ಮನೋಭಾವದಿಂದ ಸೇವೆಗೈದ ಹಿರಿಯ ತಾಯಂದಿರ ಸನ್ಮಾನ ಸಮಾರಂಭ ಕಾರ್ಯಕ್ರಮ ಜರುಗುವುದು. ಸಾನ್ನಿಧ್ಯವನ್ನು ಜಮಖಂಡಿ ಓಲೆಮಠದ ಡಾ. ಅಭಿನವ ಕುಮಾರ ಮಹಾಸ್ವಾಮಿಗಳು ವಹಿಸುವರು. ನೇತೃತ್ವವನ್ನು ಅಮೀನಗಡದ ಪ್ರಭು ಶಂಕರೇಶ್ವರ ಮಠದ ಶಂಕರರಾಜೇಂದ್ರ ಮಹಾಸ್ವಾಮಿಗಳು, ಸಮ್ಮುಖವನ್ನು ಆಂಧ್ರಪ್ರದೇಶ ನೀರಡಗುಂಬದ ಪಂಚಮಸಿದ್ಧಲಿಂಗ ಮಹಾಸ್ವಾಮಿಗಳು ವಹಿಸುವರು.
ಅಧ್ಯಕ್ಷತೆಯನ್ನು ಗದುಗಿನ ಕುಟುಂಬ ನ್ಯಾಯಾಲಯದ ನ್ಯಾಯಾಧೀಶೆ ಎಂ.ಶೋಭಾ, ಮುಖ್ಯ ಅತಿಥಿಗಳಾಗಿ ಉಪಪ್ರಾಚಾರ್ಯ ರಾಜೇಶ್ವರಿ ಮಹೇಶ್ವರಯ್ಯ, ಕೊಪ್ಪಳ ತಾಲೂಕಾ ಕಸಾಪ ಅಧ್ಯಕ್ಷೆ ಸಾವಿತ್ರಿ ಮುಜುಂದಾರ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement