ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಅವಶ್ಯ

Mainashree
Updated On : 18 Aug 2013, 11:54 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 17
ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಸಾಮಾನ್ಯ ಜ್ಞಾನದ ಹೆಚ್ಚಳಕ್ಕೆ ಪ್ರಯತ್ನ ಮಾಡಬೇಕು. ಸ್ಪರ್ಧಾತ್ಮಕ ಈ ದಿನಗಳಲ್ಲಿ ಪಠ್ಯದ ಜ್ಞಾನಕಿಂತ ಸಾಮಾನ್ಯ ಜ್ಞಾನ ಅವಶ್ಯವಾಗಿದೆ ಎಂದು ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೊಟ್ರೇಶ ಅಂಗಡಿ ಹೇಳಿದರು.
ಅವರು ಈಚೆಗೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ವ್ಯಕ್ತಿತ್ವ ವಿಕಸನವಾಗುವುದಲ್ಲದೆ ನಾಯಕತ್ವಗುಣ ಬೆಳೆದು ಬರುವುದು ಎಂದರು. ಕಾಲೇಜು ಸಂಸತ್ತನ್ನು ಜ.ತೋ.ಸೇವಾ ಸಮಿತಿಯ ಅಧ್ಯಕ್ಷ ಈಶಣ್ಣ ಬೆಟಗೇರಿ ಉದ್ಘಾಟಿಸಿದರು. ಕಾಲೇಜಿನ ಎನ್‌ಎಸ್‌ಎಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನೆಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಧ್ರುವಕುಮಾರ ಹೊಸಮನಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರವಳಿಕೆ ತಜ್ಞ ಡಾ. ಎಚ್.ಐ.ಮಾಳಿ ಮಾತನಾಡಿ, ವಿದ್ಯಾರ್ಥಿಗಳು ದೃಢತೆ, ದಕ್ಷತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು. ಪ್ರಾ. ಕೆ.ಎಸ್. ಹನುಮಂತರಾಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ವಿ. ಲಿಂಬಿಕಾಯಿ, ವಿ.ಎಂ. ಪಾಟೀಲ, ನಿವೃತ್ತ ಪ್ರೊ. ಎಂ.ಬಿ. ಗದಗ, ಎಂ.ಆರ್. ಚೂರಿ, ಪ್ರೊ. ಎಸ್.ಎಂ. ಕಲ್ಲೂರ, ಪ್ರೊ. ಎಂ.ಎಂ. ಹೆಬ್ಬಾಳ, ಡಾ. ಸೀಮಾ ಗ್ರಾಮೋಪಾಧ್ಯೆ ಉಪಸ್ಥಿತರಿದ್ದರು. ಪ್ರೊ. ವಿ.ಎಂ. ಪಾಟೀಲ ಸ್ವಾಗತಿಸಿದರು. ಪ್ರೊ. ಎಂ.ಎಂ. ಹೆಬ್ಬಾಳ ನಿರೂಪಿಸಿದರು. ಡಾ. ಸೀಮಾ ಗ್ರಾಮೋಪಾಧ್ಯೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement