ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 18 Aug 2013, 11:55 am

ಇಂದು ವೈದ್ಯಕೀಯ ಸಮ್ಮೇಳನ
ರೋಣ:  ಸಿಜಿಪಿ, ಕೆಎಫ್‌ಎಫ್ ಹಾಗೂ ಭಾರತೀಯ ವೈದ್ಯಕೀಯ ಸಂಘ ರೋಣ ಇವರ ಆಶ್ರಯದಲ್ಲಿ ವಲಯ ಮಟ್ಟದ ವೈದ್ಯಕೀಯ ಸಮ್ಮೇಳನವನ್ನು ಆಗಸ್ಟ್ 18ರಂದು ಪಟ್ಟಣದ ವಿ.ಎಫ್. ಪಾಟೀಲ ಪ್ರೌಢಶಾಲೆಯ ಹಿಂದೆ ನೂತನವಾಗಿ ನಿರ್ಮಿಸಲಾದ ಐಎಂಎ (ಭಾರತೀಯ ವೈದ್ಯಕೀಯ ಸಂಘ) ವೈದ್ಯಕೀಯ ಸಭಾಭವನದಲ್ಲಿ ಆಯೋಜಿಸಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ವೈ.ಎಂ. ಸುಧಾಕರ ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಘದ ತಾಲೂಕು ಘಟಕದ ಅಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ವಹಿಸುವರು. ಡಾ. ಯೋಗಾನಂದ ರಡ್ಡಿ, ಚರ್ಮರೋಗ ತಜ್ಞ ಡಾ. ತುಕಾರಾಮಂ ಸೋರಿ, ಚಿಕ್ಕ ಮಕ್ಕಳ ತಜ್ಞರಾದ ಡಾ. ವಿಶ್ವನಾಥ ಕುಲಕರ್ಣಿ ಮತ್ತು ಡಾ. ಜೆ.ಕೆ. ಲಖಾನಿ, ಕರ್ನಾಟಕ ಮೆಡಿಕಲ್ ಕೌನ್ಸಿಲ್ ಕಾರ್ಯದರ್ಶಿ ಡಾ. ಡಿ.ಸೋಮಶೇಖರಯ್ಯ ಹಾಗೂ ಡಾ. ಧರ್ಮರಾಯ ಇಂಗಳೆ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು. ಅನುಭವಿಕ ತಜ್ಞರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ಮಾಲಿಕೆ ಜರುಗಲಿದೆ. ಇದರ ಪ್ರಯೋಜನವನ್ನು ವೈದ್ಯಕೀಯ ಮಿತ್ರರು ಪಡೆದುಕೊಳ್ಳಬೇಕು ಎಂದು ಸಂಘದ ತಾಲೂಕು ಕಾರ್ಯದರ್ಶಿ ಡಾ. ಆರ್.ಬಿ. ಮಲ್ಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಟ್ರೈಲರ್ ರಿವರ್ಸ್ ಸ್ಪರ್ಧೆ
ನರಗುಂದ:  ಪಟ್ಟಣದ ಪುಣ್ಯಾರಾಣ್ಯ ಪತ್ರಿವನಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಾರುತಿ ಯುವಕ ಮಂಡಳ ಜಮಾಲಾಪುರ ಓಣಿಯ ವತಿಯಿಂದ ಗ್ರಾಮೀಣ ಕ್ರೀಡೆಯಾದ ಟ್ರ್ಯಾಕ್ಟರ್ ಟ್ರೈಲರ್ ರಿವರ್ಸ್ ಸ್ಫರ್ಧೆಯನ್ನು ಆ. 18 ರಂದು ಏರ್ಪಡಿಸಲಾಗಿದೆ. ಆಸಕ್ತರು ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.  
ಇಂದು ಅಕ್ಷರ ದಾಸೋಹ ಸಿಬ್ಬಂದಿ ಸಮ್ಮೇಳನ
ಗದಗ:  ಸೇವಾ ನಿಯಮಾವಳಿ ಹಾಗೂ ಕನಿಷ್ಠ ಕೂಲಿ ನಿಗದಿ ಮಾಡಲು ಒತ್ತಾಯಿಸಿ ಗದಗ ನಗರದಲ್ಲಿ ಕೆ.ಎಚ್.ಪಾಟೀಲ (ಎಪಿಎಂಸಿ ಹತ್ತಿರ) ಆ. 18ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಕಾರ್ಯದರ್ಶಿ ಮಾಲಿನಿ ಮೇಸ್ತಾ ಹಾಗೂ ರಾಜ್ಯ ಉಪಾಧ್ಯಕ್ಷ ಶರಣಬಸವ ಮರದ ಭಾಗವಹಿಸಲಿದ್ದಾರೆ ಎಂದು ಅಕ್ಷರ ದಾಸೋಹ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಯಶೋಧಾ ಬೆಟಗೇರಿ ಹಾಗೂ ಸಿಐಟಿಯು ಜಿಲ್ಲಾ ಅಧ್ಯಕ್ಷ ಎಂ.ಎಸ್.ಹಡಪದ ಮತ್ತು ಜಿಲ್ಲಾ ಮುಖಂಡ ಮಹೇಶ ಹಿರೇಮಠ, ವಿಠ್ಠಲ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದು, ಜಿಲ್ಲೆಯ ಎಲ್ಲಾ ಅಕ್ಷರದಾಸೋಹ ನೌಕರರು ಈ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹೆಚ್ಚಿನ ಮಾಹಿತಿಗಾಗಿ 8431224873, 9481284861, 9886761978, 9449427548 ಎಂದು ವಿನಂತಿಸಿದ್ದಾರೆ.

ನಾಳೆ ಪಿಂಚಣಿ ಅದಾಲತ್
ಮುಂಡರಗಿ:  ಗದಗ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಆಗಸ್ಟ್ 19ರಂದು ಬೆಳಗ್ಗೆ 11ಕ್ಕೆ ಮುಂಡರಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮುಂಡರಗಿ ಹೋಬಳಿಯ ಎಲ್ಲ ಗ್ರಾಮಗಳ ಅರ್ಹ ಅರ್ಜಿದಾರರಿಂದ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ, ವಿಕಲಚೇತನ, ವಿಧವಾ, ಸಂಧ್ಯಾ ಸುರಕ್ಷಾ ಹಾಗೂ ಆಮ್ಮ ಆದ್ಮಿ ಯೋಜನೆಗಳ ಪ್ರಯೋಜನ ಪಡೆಯಲು ಅರ್ಜಿ ಸ್ವೀಕರಿಸುವ ಪಿಂಚಣಿ ಅದಾಲತ್ ನಡೆಯಲಿದೆ. ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದ್ದು, ಅಹವಾಲು ಸ್ವೀಕರಿಸಲಾಗುವುದು. ಅರ್ಜಿದಾರರು ಅರ್ಜಿ ಜತೆಗೆ ಪಡಿತರ ಚೀಟಿ, ಮತದಾರರ ಚೀಟಿ, ಗುರುತಿನ ಚೀಟಿ, ರಹವಾಸಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, 4 ಪಾಸ್ ಪೋರ್ಟ ಸೈಜ್ ಫೋಟೋ ವಯಸ್ಸಿನ ದಾಖಲೆ, ವಿಕಲಚೇತನ ವೈದ್ಯಕೀಯ ಪ್ರಮಾಣಪತ್ರ, ಹೊಂದಿದ ಜಮೀನು ಖಾತೆ ಉತಾರ ದಾಖಲೆಗಳನ್ನು ಲಗತ್ತಿಸಿ ಖುದ್ದಾಗಿ ಅರ್ರ್ಜಿದಾರರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ಎಸ್.ಆರ್. ಶಿರಕೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
22ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ
ನರಗುಂದ:  ತಾಲೂಕಿನ ಶಿರೋಳ ಗ್ರಾಮದಲ್ಲಿ ಆ. 22ರ ಬೆಳಗ್ಗೆ 10 ಗಂಟೆಗೆ ಮರಡಿ ಮಾರುತಿ ದೇವಸ್ಥಾನದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಗದಗ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ಹಾಗೂ ಶಿರೋಳದ ಡಾ. ವಿ.ಎಸ್. ಅಭಿಮಾನಿ ಬಳಗ ಇವುಗಳ ಆಶ್ರಯದಲ್ಲಿ ಉಚಿತ ನೇತ್ರ (ಕಣ್ಣಿನ) ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಆಸಕ್ತರು ಮೊ. 9740043327, 9908167509, 8095391735, 9945946168 ಈ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement