ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ರೀಡೆ: ಉತ್ತಮ ಸಾಧನೆ

Lingaraj Badiger
Updated On : 19 Aug 2013, 11:55 am

ನರಗುಂದ:  ತಾಲೂಕಿನ ರಡ್ಡೇರನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಕಲ್ಲಾಪುರ ಗ್ರಾಮದಲ್ಲಿ ನಡೆದ ಶಿರೋಳ ಗ್ರುಪ್ ಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಬಡ್ಡಿಯಲ್ಲಿ ಬಾಲಕರ ವಿಭಾಗದಲ್ಲಿ ನಾಗರಾಜ ಬೀರಗೌಡ್ರ, ಮತ್ತು ಸಂಗಡಿಗರು, ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ಕೆಲಗೇರಿ ಮತ್ತು ಸಂಗಡಿಗರು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಯಕ್ತಿಕ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ಐಶ್ವರ್ಯ ಕೆಳಗೇರಿ ಪ್ರಥಮ, 100 ಮೀ ಓಟದಲ್ಲಿ ದ್ವಿತೀಯ, ಗುಂಡು ಎಸೆತದಲ್ಲಿ ದ್ವಿತೀಯ ಹಾಗೂ ಬಾಲಕರ ವಿಭಾಗ ಗುಂಡು ಎಸೆತದಲ್ಲಿ ನಾಗರಾಜ ಬೀರನಗೌಡ್ರ ದ್ವಿತೀಯ, ಚಕ್ರ ಎಸೆತದಲ್ಲಿ ಸಾಗರ ಚಲವಾದಿ ದ್ವಿತೀಯ ಸ್ಥಾನ, ಬಾಲಕೀಯರ ವಿಭಾಗದಲ್ಲಿ 600 ಮೀ. ಓಟದಲ್ಲಿ ಲಕ್ಷ್ಮೀಬಾಯಿ ಚಿತ್ತರಗಿ ತೃತೀಯ, ಚಕ್ರ ಎಸೆತದಲ್ಲಿ ವಿಜಯಲಕ್ಷ್ಮೀ ಮಠಪತಿ ತೃತೀಯ ಸ್ಥಾನ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಿ.ಜಿ. ಪಾಟೀಲ, ಪ್ರಧಾನಗುರು ಎಸ್.ಎಸ್. ಮಡೋಳೆ, ಶಿಕ್ಷಕ ಜಿ.ಬಿ. ಪೂಜಾರ, ಎಂ.ಬಿ. ಯಂಡಿಗೇರಿ, ವಿ.ಬಿ. ಹಿರೇಮಠ, ಎನ್.ವಿ. ಗುದಗಾಪುರ, ಸುರೇಶ ಬನ್ನಿಗಿಡ, ಇರ್ಶ್ಯಾದ ಅಹ್ಮದ, ಎಲ್.ಬಿ.ಬಸವಡೆಯರ ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ಜಾತ್ರಾಮಹೋತ್ಸವ
ನರಗುಂದ: ಪಟ್ಟಣದ ಪುಣ್ಯಾರಣ್ಯ ಪತ್ರೀವನ ಮಠದ ಜಾತ್ರಾ ಮಹೋತ್ಸವ ಹಾಗೂ 4ನೇ ಪೀಠಾಧಿಪತಿಗಳ ಪಟ್ಟಾಭಿಷೇಕದ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮವು ಆ. 19ರ ಸಂಜೆ 7 ಗಂಟೆಗೆ ಶ್ರೀಮಠದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ಕಿಲ್ಲಾ ತೋರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಶ್ರೀಗಳು, ಅವರಾಧಿಯ ಫಲಹಾರೇಶ್ವರ ಸಂಸ್ಥಾನಮಠದ ಮೃತ್ಯುಂಜಯ ಶ್ರೀಗಳು, ಸೋಮನಕೊಪ್ಪ ಪೂರ್ಣಾನಂದ ಮಠದ ಶ್ರದ್ಧಾನಂದ ಶ್ರೀಗಳು, ನಲಗುಂದ ಜ. ನಾಗಲಿಂಗೇಶ್ವರ ಮಠದ ವೀರೇಶ್ವರ ಶ್ರೀಗಳು, ಚಿಕ್ಕುಂಬಿ ನಾಗಲಿಂಗೇಶ್ವರ ಮಠದ ನಾಗಲಿಂಗ ಶ್ರೀಗಳು, ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ಸುಕ್ಷೇತ್ರ ವಿರಕ್ತಮಠದ ಚನ್ನಬಸವ ಶ್ರೀಗಳು, ಭೈರಹನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ವಹಿಸುವರು. ಶಾಸಕ ಬಿ.ಆರ್. ಯಾವಗಲ್, ಮಾಜಿ ಸಚಿವ ಸಿ.ಸಿ. ಪಾಟೀಲ, ಬಿ.ಎಸ್. ಉಪ್ಪಾರ, ತಹಸೀಲ್ದಾರ್ ವೆಂಕನಗೌಡ ಪಾಟೀಲ, ಸಿಪಿಐ ಪ್ರಶಾಂತ ಸಿದ್ಧನಗೌಡ್ರ, ಪುರಸಭೆ ಮುಖ್ಯಾಧಿಕಾರಿ ಎಸ್. ರಾಜಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ಚನ್ನಬಸಪ್ಪ ಕಂಠಿ ಮುಂತಾದವರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಇಂದು ಶ್ರೀಗಳ ಜಾತ್ರೆ
ನರಗುಂದ: ತಾಲೂಕಿನ ಮುದ್ಗಣಕಿ ಗ್ರಾಮದ ಅಜ್ಜೇಶ್ವರ ಶ್ರೀಗಳ ಜಾತ್ರಾ ಮಹೋತ್ಸವವು ಆ. 19ರ ಸಂಜೆ 6 ಗಂಟೆಗೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದ ಶಾಂತಲಿಂಗ ಶ್ರೀಗಳ ಮತ್ತು ಬೆಳಗಾವಿ ರುದ್ರಾಕ್ಷಿ ಮಠದ ಶಿವಯೋಗಿ ದೇವರ ನೇತೃತ್ವದಲ್ಲಿ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಕಳಸಾ-ಬಂಡೂರಿ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಮನವಿ
ಹೊಳೆಆಲೂರ: ಕಳಸಾ ಬಂಡೂರಿ ನಾಲಾ ಜೋಡಣೆ ಮಾಡಿ ಮಲಪ್ರಭಾ ಜಲಾಶಯಕ್ಕೆ ನೀರು ಹರಿಸಿ, ನವಿಲುತೀರ್ಥ ಡ್ಯಾಂನ್ನು ತುಂಬಿಸಿ ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ವಿಳಂಬವಾಗಿದ್ದು, ಶೀಘ್ರ ಯೋಜನೆಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಹೊಳೆಆಲೂರಿನ ಮತ್ತು ಸುತ್ತಮುತ್ತಲಿನ ರೈತರು ಈಚೆಗೆ ನಾಡ ಕಚೇರಿಗೆ ತೆರಳಿ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮಲಪ್ರಭಾ ನದಿಗೆ ಜೋಡಣೆ ಮಾಡುವುದರಿಂದ 9 ತಾಲೂಕುಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿ ಸೌಲಭ್ಯ ಲಭ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿ ತಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಬಸವರಾಜ ಖವಾಸ್ತ, ಮಹಾಂತೇಶ ಬ್ಯಾಡಗಿ, ಶಿವಯೋಗಿ ಕಡಬಿನಕಟ್ಟಿ, ಪ್ರಕಾಶ ಗೌರಿಮಠ, ಎನ್.ಎಸ್. ಮದ್ನಳ್ಳಿ, ಎಸ್.ಎ. ಸಂತೋಜಿ, ಎಂ.ಸಿ. ಹೆಬ್ಬಳ್ಳಿ, ಪಿ.ಆರ್. ಪವಾರ, ಮೋತಿಲಾಲ ರಾವಳ, ಶಿವಣ್ಣ ಕಲ್ಯಾಣಿ, ಎಂ.ಎಚ್. ಕೋರಗಣ್ಣವರ, ಬಿ.ಬಿ. ಹಿರೇಗೌಡ್ರ, ಎಂ.ಆರ್. ನೀರಲಗಿ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement