ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡಿ

Mainashree
Updated On : 20 Aug 2013, 11:26 am

ಕನ್ನಡಪ್ರಭ ವಾರ್ತೆ, ನರಗುಂದ, ಆ. 19
ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ. ವಿದ್ಯಾರ್ಥಿಗಳು ಕಲಿಕೆ ಸಮಯದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ದೇಶಕ್ಕೆ ನಿಮ್ಮದೇ ಕೊಡಗೆ ನೀಡಲು ಮುಂದಾಗಬೇಕೆಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಹೇಳಿದರು.
ಅವರು ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ  2013-14ನೇ ಸಾಲಿನ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಕಲಿಕೆ ದಿವಸಗಳಲ್ಲಿ ಹೆಚ್ಚು ಯಾವುದೇ ಅನ್ಯ ಮಾರ್ಗಗಳ ಬಗ್ಗೆ ಲಕ್ಷ ಕೊಡದೇ ನಿಮ್ಮ ವರ್ಗಗಳ ವಿಷಯಗಳ ಬಗ್ಗೆ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ನಿಮ್ಮ ಹೆತ್ತವರ ಹೆಸರು ತರುವ ಜತೆಗೆ ದೇಶಕ್ಕೆ ನಿಮ್ಮದೇ ಕೊಡಗೆ ನೀಡಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ.
ಈ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳ ಜೀವನಕ್ಕೆ ಟಿ.ವಿ. ಮೊಬೈಲ್‌ಗಳು ಬಹಳ ಮಾರಕವಾಗಿದ್ದು, ಅದಕ್ಕೆ ವಿದ್ಯಾರ್ಥಿಗಳು ಇವುಗಳಿಂದ ಆದಷ್ಟು ದೂರ ಇರಲು ಮುಂದಾಗಬೇಕು ಎಂದರು. ಪ್ರಾ. ಇಮಾಮ್ ಖಾಸಿಂ ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳವಂತಹ ಕೌಶಲ್ಯ ಬೆಳಸಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕ ಬಿ.ಸಿ. ಹನುಮಂತಗೌಡ್ರ, ಡಿ.ಆರ್. ಕಲಬುರ್ಗಿ, ಶಿವಾನಂದ ಜೋಗಿ, ಎಚ್.ಎಫ್. ಮರಲಕ್ಕನವರ, ಎಲ್.ಎಂ. ಅರ್ಬಣದ, ಎಸ್.ಪಿ. ಹುಲಮನಿ ಮುಂತಾದವರು ಹಾಜರಿದ್ದರು. ಪಿ.ವಿ. ಮನೇನಕೊಪ್ಪ ಸ್ವಾಗತಿಸಿದರು. ಎಸ್.ವಿ. ಬಂದೋಜಿ ನಿರೂಪಿಸಿದರು. ಎಸ್.ಎಸ್. ಮಜ್ಜಿಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement