ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 20 Aug 2013, 11:27 am

ಅನ್ನಭಾಗ್ಯ ಯೋಜನೆಯ 190 ಚೀಲ ಅಕ್ಕಿ ವಶ
ಗದಗ:  ನಗರದ ಹೃದಯ ಭಾಗದಲ್ಲಿರುವ ಮಾನ್ವಿ ಅವರ ವಕಾರಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ, ಸುಮಾರು 190 ಚೀಲ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಸೋಮವಾರ ರಾತ್ರಿ ವಶ ಪಡಿಸಿಕೊಂಡ ಘಟನೆ ನಡೆದಿದೆ.  ಖಚಿತ ಮಾಹಿತಿಯೊಂದಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಇಲಾಖೆಯ ಉಪನಿರ್ದೇಶಕ ಶಶೀಧರ ಖುರೇರ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ 50 ಕೆಜಿಯ ಒಟ್ಟು 190 ಚೀಲ ಅಕ್ಕಿ ವಶ ಪಡಿಸಿಕೊಂಡಿದ್ದಾರೆ. ನಗರದ ಮಂಜುನಾಥ ಲಕ್ಕುಂಡಿ ಎನ್ನುವವರಿಗೆ ಸೇರಿದ ಅಕ್ಕಿ ಎಂದು ತಿಳಿಸಿದ ಶಶೀಧರ ಖುರೇರ್, ಈ ಬಗ್ಗೆ ಅಕ್ರಮ ದಾಸ್ತಾನು ತಪಾಸಣೆ ಮಾಡಿದಾಗಿ ಸಂಗ್ರಹಿಸಿಟ್ಟ ಅಕ್ಕಿಯ ಬಗ್ಗೆ ಸಮರ್ಪಕ ಮಾಹಿತಿ ಒದಗಿಸಲು ವಿಫಲವಾದ ಕಾರಣ ಲಕ್ಕುಂಡಿ ಅವರ ಮೇಲೆ ಸೂಕ್ತ ತನಿಖೆ ನಡೆಸುವಂತೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಕ್ಕಿಯನ್ನು ಸರ್ಕಾರಿ ಉಗ್ರಾಣಕ್ಕೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಮಂಕಣ್ಣವರ ಹಾಗೂ ಸಿಬ್ಬಂದಿ ಹಾಜರಿದ್ದರು.
ಹಾಲು, ಹಣ್ಣು ವಿತರಣೆ
ಗದಗ:  ಸೂರ್ಯವಂಶ ಕ್ಷತ್ರಿಯ ಕಲಾಲ (ಖಾಟಿ) ಸಮಾಜ ಬಾಂಧವರು ಈಚೆಗೆ 67ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಗದಗ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿದರು. ಸಮಾಜದ ಗೌರವಾಧ್ಯಕ್ಷ ಜಮನಾಜಿರಾವ್ ಕಾಂಬಳೆಕರ, ಅಧ್ಯಕ್ಷ ನಾರಾಯಣ ಕಲಾಲ, ಉಪಾಧ್ಯಕ್ಷ ನಾಗರಾಜ ಕಲಾಲ, ಪ್ರಧಾನ ಕಾರ್ಯದರ್ಶಿ ಮಾರುತಿರಾವ ಕಲಾಲ, ಸಹ ಕಾರ್ಯದರ್ಶಿ ದೇವೇಂದ್ರಪ್ಪ ಕಲಾಲ, ಖಜಾಂಚಿ ನಾಗರಾಜ ಕಲಾಲ, ಆನಂದ ಕಲಾಲ, ನಾಗರಾಜ ಕಲಾಲ, ಡಾಕಪ್ಪ ಕಲಾಲ, ಶ್ರೀಕಾಂತ ಕಾಂಬಳೇಕರ, ಶಂಕರ ಕಲಾಲ, ಆಂಜನೇಯ ಕಾಂಬಳೇಕರ, ನಾರಾಯಣರಾವ್ ಶಾಪುರಕರ, ರಾಯಪ್ಪ ಕಲಾಲ, ವಿಠ್ಠಲರಾವ್ ಕಾಂಬಳೇಕರ, ಫಕ್ಕೀರಪ್ಪ ಕಲಾಲ,  ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement