ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಳಕಪ್ಪ ಬಂಡಿ ಜನ್ಮದಿನ ಆಚರಣೆ

Mainashree
Updated On : 21 Aug 2013, 11:24 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 20
ಸ್ಥಳೀಯ ಬಿಜೆಪಿ ಘಟಕದಿಂದ ಮಾಜಿ ಸಚಿವ ಕಳಕಪ್ಪ ಬಂಡಿಯವರ 46 ನೇ ಜನ್ಮದಿನವನ್ನು ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ಆಚರಿಸಿದರು.
ಪುರಸಭೆ ಸದಸ್ಯ ಶರಣಪ್ಪ ರೇವಡಿ ಮಾತನಾಡಿ, ಮಾಜಿ ಸಚಿವ ಕಳಕಪ್ಪ ಬಂಡಿಯವರು ತಮ್ಮ ಅಧಿಕಾರವಧಿಯಲ್ಲಿ ಗಜೇಂದ್ರಗಡ ಪಟ್ಟಣ ಸೇರಿದಂತೆ ರೋಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಶೈಕ್ಷಣಿಕ, ಪ್ರಗತಿ ಜತೆಗೆ ಸರ್ಕಾರದ ಹಲವಾರು ಯೋಜನೆಗಳನ್ನು ಈ ಭಾಗಕ್ಕೆ ತರುವ ಮೂಲಕ ಮತಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ ಎಂದ ಅವರು, ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಹಿತ ಕಾಯುವಲ್ಲಿ ವಿಫಲವಾಗಿದೆ. ಹೀಗಾಗಿ ಬರುವ ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲು ಖಚಿತ ಎಂದು ಭವಿಷ್ಯ ನುಡಿದರು. ಪ್ರಭು ಚವಡಿ, ಅಶೋಕ ವನ್ನಾಲ ಮಾತನಾಡಿದರು.
ಕೆ.ಜಿ. ಬಂಡಿ ಜನ್ಮದಿನ ಪ್ರಯುಕ್ತ ಸಮೀಪದ ದಕ್ಷಿಣ ಕಾಶಿ ಶ್ರೀ ಕಾಲಕಾಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಾಲು, ಹಣ್ಣು ಹಾಗೂ ಅಲೆಮಾರಿ ಕುಟುಂಬಗಳಿಗೆ ದವಸ ಧಾನ್ಯ ವಿತರಿಸಿದರು. ರವಿ ಕಲಾಲ, ವಿಜಯ ರಾಯಬಾಗಿ, ಮುತ್ತಣ್ಣ ಚಟ್ಟೇರ, ಬಸವರಾಜ ಬಂಕದ, ಕವಿತಾ ಜಾಲಿಹಾಳ, ವಿಜಯಲಕ್ಷ್ಮಿ ಚಟ್ಟೇರ, ಶರಣಪ್ಪ ಚಳಗೇರಿ, ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement