ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾನೂನು ತಿಳಿವಳಿಕೆ ಅಗತ್ಯ: ವಿಕಾಸ

Mainashree
Updated On : 21 Aug 2013, 11:26 am

ಶಿರಹಟ್ಟಿ: ಪ್ರತಿಯೊಬ್ಬರೂ ಕಾನೂನಿನ ತಿಳಿವಳಿಕೆ ಹೊಂದುವುದು ಅಗತ್ಯ ಎಂದು ಪಿಎಸ್‌ಐ ವಿಕಾಸ ಲಮಾಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬೇಂದ್ರೆ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸಹಾಯಕ ಸರ್ಕಾರಿ ಅಭಿಯೋಜಕರು ಲಕ್ಷೇಶ್ವರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸ ಕಾನೂನು ಮಹಿಳೆಯರಿಗೆ ರಕ್ಷಾ ಕವಚಗಳಾಗಿವೆ. ಹೆಣ್ಣು ಮಕ್ಕಳು ಸಮಾಜದಲ್ಲಿ ಗೌರವದಿಂದ ಬಾಳಬೇಕಾದರೆ, ತೊಂದರೆ, ಹಿಯಾಳಿಕೆ ಇನ್ನಿತರ ಕಷ್ಟಗಳಿಂದ ದೂರವಾಗಿ ಸ್ವತಂತ್ರವಾಗಿ ಬದುಕಲು ಕಾನೂನು ತಿಳಿವಳಿಕೆ ಅಗತ್ಯ. ಪ್ರಸ್ತುತ ಸ್ಥಿತಿಯಲ್ಲಿ ಸರಿಯಾದ ಕಾನೂನು ತಿಳಿವಳಿಕೆ ಇಲ್ಲದಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ ಎಂದರು.
ನ್ಯಾಯವಾದಿ ವಿ.ಆರ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ಸಿ. ಪಾಟೀಲ ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಮತ್ತು ಆರೋಗ್ಯ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಜಿ.ಎಸ್. ಪಾಟೀಲ, ವಿ.ಎಸ್. ಪಶುಪತಿಹಾಳ,  ಬಿ.ಎಸ್. ಘೋಂಗಡಿ, ಸುರೇಖಾ ಮಾಲಸೂರೆ, ಪಪಂ ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಎಸ್.ಕೆ. ಹೊನ್ನೇಗೌಡರ ಮತ್ತಿತರರು ಹಾಜರಿದ್ದರು. ನ್ಯಾಯವಾದಿ ಎನ್.ಸಿ. ಅಮವಾಸಿ ಸ್ವಾಗತಿಸಿದರು. ಮಹೇಶ ಹಾರುಗೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement