ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 21 Aug 2013, 11:25 am

ಇಂದು ಸಾಹಿತ್ಯ ಪೌರ್ಣಿಮೆ
ಗದಗ: ಗ್ರಾಮೀಣ ಪರಿಸರದಲ್ಲಿ ಸಾಹಿತ್ಯದ ಕಂಪು ಅರಳಿಸಲು ಆ. 21ರಂದು ಸಂಜೆ 5.30 ಗಂಟೆಗೆ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಮೇವುಂಡಿ ಗ್ರಾಮದ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವು ಸಾಹಿತ್ಯ ಪೌರ್ಣಿಮೆ ಕಾರ್ಯಕ್ರಮವನ್ನು ಆಯೋಜಿಸಿದೆ. ಉದ್ಘಾಟನೆಯನ್ನು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ನೆರವೇರಿಸುವರು. ಅಧ್ಯಕ್ಷತೆಯನ್ನು ಮೇವುಂಡಿ ಗ್ರಾಮ ಘಟಕದ ಗೌರವಾಧ್ಯಕ್ಷ ಮಹೇಶ ಕೊರ್ಲಹಳ್ಳಿ ವಹಿಸುವರು. ಅತಿಥಿಗಳಾಗಿ ಮುಂಡರಗಿ ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
26ರಂದು ವಿಚಾರ ಸಂಕಿರಣ
ಮುಂಡರಗಿ: ಹೈದ್ರಾಬಾದ್ ಕರ್ನಾಟಕಕ್ಕೆ 371ಕಲಂ ಜಾರಿಗೊಂಡು ಅಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅನೇಕ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ. ಹಾಗೆಯೇ 371ಕಲಂ ಮುಂಡರಗಿ ಭಾಗಕ್ಕೆ ಅವಕಾಶ ತಪ್ಪಿದ ಕಾರಣದಿಂದ ಮತ್ತೆ ಇಲ್ಲಿಯ ಭಾಗದವರಿಗೂ 371ಕಲಂ ಅನ್ವಯಗೊಂಡು ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಆ. 26 ರಂದು ಬೆಳಗ್ಗೆ 11 ಗಂಟೆಗೆ ಪುರಸಭೆ ಗಾಂಧಿ ಭವನದಲ್ಲಿ ಗಂಗಾಧರ ಕುಷ್ಟಗಿ ಹಾಗೂ ರಾಜ್ಯ ಕುರಿ ಮತ್ತು ಉಣ್ಣೆ ನಿಗಮ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ನೇತೃತ್ವದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ವಿಚಾರ ಸಂಕಿರಣದಲ್ಲಿ ಮಂಡನೆಯಾದ ವಿಷಯವನ್ನು ಸರ್ಕಾರಕ್ಕೆ ತಲುಪಿಸಲು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದು. ಹೈದ್ರಾಬಾದ್ ವಿಮೋಚನಾ ಚಳವಳಿಯಲ್ಲಿ ಮುಂಡರಗಿ ಭಾಗದ ಹೋರಾಟಗಾರರು ಮುಂಚೂಣಿಯಲ್ಲಿದ್ದು ಭೀಮರಾವ್ ಪ್ರಮುಖಪಾತ್ರ ವಹಿಸಿದ್ದರು. ಮುಂಡರಗಿ ಭಾವನಾತ್ಮಕ ಮತ್ತು ವ್ಯವಹಾರಿಕವಾಗಿ ಕೊಪ್ಪಳ ಜಿಲ್ಲೆಗೆ ಹೆಚ್ಚು ಹತ್ತಿರವಾಗಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತಿದ್ದ ಮುಂಡರಗಿ, ನಂತರ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ಇದರಿಂದ ಆರ್ಥಿಕವಾಗಿ ಮತ್ತು ಶೈಕ್ಷಣಿಕಗಾಗಿ ಸಾಕಷ್ಟು ಹಿಂದುಳಿದ ತಾಲೂಕು ಕೊಪ್ಪಳ ಕ್ಷೇತ್ರದಿಂದ ಬೇರ್ಪಟ್ಟಿರುವುದರಿಂದ 371 ಕಲಂನಿಂದ ಅವಕಾಶ ವಂಚಿತವಾಯಿತು. ಈ ಭಾಗದವರು ಹೋರಾಟ ಮಾಡಿ 371 ಕಲಂ ಅನ್ವಯವಾಗುವಂತೆ ಮತ್ತೆ ಹೋರಾಟಕ್ಕೆ ಮುಂದಾಗುವಂತೆ ಮಾಡಲಾಗುವುದು ಎಂದಿದ್ದಾರೆ. ಈಶ್ವರಪ್ಪ ಹಂಚಿನಾಳ, ವೀರಣ್ಣ ತುಪ್ಪದ, ಎ.ಕೆ. ಮುಲ್ಲಾನವರ, ಆನಂದ ರಾಮೇನಹಳ್ಳಿ, ರಾಮಚಂದ್ರ.ಜಿ. ಇತರರು ಪಾಲ್ಗೊಳ್ಳುವರು ಎಂದು ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸಪ್ಪ ಕರೆಣ್ಣವರ ನಿಧನ
ಲಕ್ಷ್ಮೇಶ್ವರ: ಸಮೀಪದ ಗೊಜನೂರ ಗ್ರಾಮದ ಬಸಪ್ಪ ಕರೆಣ್ಣವರ (ಬಡ್ನಿ) (55) ಇವರು ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರು ಗೊಜನೂರು ಗ್ರಾಪಂ ಅಧ್ಯಕ್ಷೆ ಹರಳಕ್ಕ ಕರೆಣ್ಣವರ ಅವರ ಪತಿಯಾಗಿದ್ದರು. ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಸಹೋದರ ಸಹೋದರಿಯರನ್ನು ಹೊಂದಿದ್ದರು.
ಲಕ್ಷ್ಮೇಶ್ವರ: ಮಹಾದ್ವಾರ ಪ್ರತಿಷ್ಠಾಪನೆ
ಲಕ್ಷ್ಮೇಶ್ವರ: ಬಾಳೆಹೊನ್ನೂರಿನ 1008 ಜಗದ್ಗುರು ವೀರಗಂಗಾಧರ ಸ್ವಾಮಿಗಳ ಸಮುದಾಯ ಭವನ ನಿರ್ಮಾಣಗೊಂಡು ಮುಕ್ತಾಯ ಹಂತಕ್ಕೆ ಬಂದಿದ್ದು, ರಂಭಾಪುರಿ ಪೀಠದ 1008 ಜಗದ್ಗುರು ವೀರ ಸೋಮೇಶ್ವರ ಸ್ವಾಮಿಗಳ ಆಶಯದಂತೆ ಸಮುದಾಯ ಭವನ ನಿರ್ಮಾಣವಾಗಿದ್ದು, ಈ ಸಮುದಾಯ ಭವನದ ಉದ್ಘಾಟನೆಯು ನ. 5, 6ರಂದು ಜರುಗಲಿದೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಹೇಳಿದರು. ಪಟ್ಟಣದ ಬಸ್ತಿಬಣದ ಜಿ.ಎಂ. ಮಹಾಂತಶೆಟ್ಟರ ತೋಟದ ಹತ್ತಿರ ನಿರ್ಮಾಣಗೊಂಡಿರುವ ವೀರಗಂಗಾಧರ ಸಮುದಾಯ ಭವನದ ಮಹಾದ್ವಾರದ ಪ್ರತಿಷ್ಠಾಪನೆ ಸೋಮವಾರ ವಿಧ್ಯುಕ್ತವಾಗಿ ನೆರವೇರಿಸಲಾಯಿತು. ಈ ಸಂದರ್ಭ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಮಾತನಾಡಿ, ನಮ್ಮೂರಿಗೆ ಇಂತಹ ಒಂದು ಭವ್ಯ ಕಟ್ಟಡದ ಅವಶ್ಯಕತೆ ಇತ್ತು. ಇದನ್ನು ಮನಗಂಡ ನಾವು  ಬಾಳೆ ಹೊನ್ನೂರಿನ ಜಗದ್ಗುರುಗಳನ್ನು ಭೇಟಿಯಾದಾಗ ವೀರಗಂಗಾಧರ ಸಮುದಾಯ ಭವನ ನಿರ್ಮಾಣ ಮಾಡಲು ಸೂಚಿಸಿದರು. ಶ್ರೀಗಳ ಅಪ್ಪಣೆಯಂತೆ ರು. 1.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಈಗ ನಿರ್ಮಾಣವಾಗಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಸಮುದಾಯ ಭವನ ನಿರ್ಮಾಣದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಅನೇಕರು ಧನದ ಸಹಾಯ ಸಲ್ಲಿಸಿದ್ದಾರೆ ಎಂದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಹಿರಿಯರಾದ ರುದ್ರಯ್ಯ ಪುರಾಣಿಕಮಠ, ಕುಬೇರಪ್ಪ ಮಹಾಂತಶೆಟ್ಟರ, ಚೆಂಬಣ್ಣ ಬಾಳಿಕಾಯಿ, ಪ್ರೊ. ಎನ್.ಎಸ್. ಪಾಟೀಲ, ಚೆನ್ನಪ್ಪ ಕೋಲಕಾರ, ಸೋಮಣ್ಣ ವಡಕಣ್ಣವರ, ಸಿದ್ದನಗೌಡ ಬೊಳ್ಳೊಳ್ಳಿ, ಸೋಮಯ್ಯ ಬಾಳಿಹಳ್ಳಿಮಠ, ಡಾ. ಪಿ.ಡಿ. ತೋಟದ, ಆನಂದ ಮೆಕ್ಕಿ, ಬಾಬಣ್ಣ ವಡಕಣ್ಣವರ, ವೆಂಕಟೇಶ ಮಾತಾಡೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement