ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 21 Aug 2013, 11:27 am

ಇಂದಿನಿಂದ ಆರಾಧನಾ ಮಹೋತ್ಸವ
ಗದಗ:  ಕರಿಯಮ್ಮಕಲ್ಲು ಬಡಾವಣೆಯಲ್ಲಿರುವ ರಾಘವೇಂದ್ರಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ಅಷ್ಟಮ ಆರಾಧನಾ ಮಹೋತ್ಸವವು ಆ. 21 ರಿಂದ 23 ರವರೆಗೆ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 5 ರಿಂದ 7ರವರೆಗೆ ಶ್ರೀ ರಾಘವೇಂದ್ರಸ್ವಾಮಿಗಳ ಗುರುಪದಹಾರ ಮತ್ತು ಸ್ತವನ, ಬೆಳಗ್ಗೆ 7 ರಿಂದ 8ರವರೆಗೆ ಶ್ರೀ ಹರಿವಾಯು ಸ್ತುತಿ ಹಾಗೂ ರಾಘವೇಂದ್ರ ಸ್ತುತಿ ಅಷ್ಟೋತ್ತರ ಪಂಚಾಮೃತಾಭಿಷೇಕ ಅಲಂಕಾರ ಪೂಜೆ, ವಿಶೇಷ ಸೇವೆಗಳು ಜರುಗುವವು.  ಈ ಮೂರು ದಿನಗಳಂದು ಬೆಳಗ್ಗೆ 8 ರಿಂದ 9 ಗಂಟೆವರೆಗೆ ಶ್ರೀ ಹರಿಪ್ರಿಯಾ ಭಜನಾ ಮಂಡಳಿಯವರಿಂದ ಭಜನೆ, ಹಾಗೂ ಶ್ರೀ ಹರೇ ನಿವಾಸ ಭಜನಾ ಮಂಡಳಿಯವರಿಂದ ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ಭಜನೆ ನೆರವೇರಲಿವೆ. ಆ. 21ರಂದು ಪೂರ್ವಾರಾಧನೆ ಬೆಳಗ್ಗೆ 11 ಗಂಟೆಗೆ ಪಿಪಿಜೆಎಂ ಸಂಗೀತ ಕಾಲೇಜಿನ ಉಪನ್ಯಾಸಕರಾದ ಡಾ. ಶ್ರೀಕಾಂತ ಬಿಂದುಮಾಧವ ಪಾಠಕ ಇವರಿಂದ ನಡೆಯಲಿದೆ. ಅಂದೇ ಸಂಗೀತ ಸಾಧನ ಕಚೇರಿಯು ದೀಪ್ತಿ ಶ್ರೀಕಾಂತ ಪಾಠಕ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ಆ. 22 ರಂದು ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 11.30 ಗಂಟೆಗೆ ಪಂ. ಶ್ರೀಕಾಂತಾಚಾರ್ಯ ನಿಲೂಗಲ್ ಇವರಿಂದ ಉಪನ್ಯಾಸ ಕಾರ್ಯಕ್ರಮ ನೆರವೇರುವುದು. ಸಂಜೆ 6.30ಕ್ಕೆ ಫಣಿಂದ್ರಾಚಾರ್ಯ ದ್ಯಾಮೇನಹಳ್ಳಿ ಧಾರವಾಡ ಇವರ ನಿರ್ದೇಶನದಲ್ಲಿ ಗುರು ರಾಘವೇಂದ್ರ ಸೇವಾ ಸಮಿತಿಯ ಕಲಾ ಬಳಗದವರಿಂದ ದಾಸರಾಯ ನಮ್ಮ ವ್ಯಾಸರಾಯ ಎಂಬ ಸಂಗೀತ ರೂಪಕ ಪ್ರದರ್ಶನಗೊಳ್ಳಲಿದೆ. ಆ. 23ರಂದು ಉತ್ತರಾಧನೆ (ಮೂರು ದಿನಗಳಂದು) ರಾತ್ರಿ 8ಗಂಟೆಗೆ ಪಾಲಕಿಸೇವೆ, ರಥೋತ್ಸವ, ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ, ಫಲಮಂತ್ರಾಕ್ಷತೆ ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಎಂದು ಗುರುರಾಘವೇಂದ್ರ ಸೇವಾ ಸಮಿತಿಯ ಅಧ್ಯಕ್ಷ ಗುರಣ್ಣ ಬಳಗಾನೂರ ಹಾಗೂ ಸದಸ್ಯರು ತಿಳಿಸಿದ್ದಾರೆ.
ಇಂದು ಉಚಿತ  ತಪಾಸಣಾ ಶಿಬಿರ
ಗದಗ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಬಿಪಿಎಲ್ ಪಡಿತರ ಹೊಂದಿರುವ ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆ. 21ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆ ಗದಗದಲ್ಲಿ ಹಮ್ಮಿಕೊಳ್ಳಲಾಗಿದೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಗಳನ್ನು ತಪಾಸಿಸಿ ಸೂಕ್ತ ಸಲಹೆ ನೀಡುವರು. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದ ರೋಗಿಗಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಮಾಡಲಾಗವುದು. ಹೃದಯರೋಗ, ಮೂತ್ರಪಿಂಡದಲ್ಲಿ ಕಲ್ಲು, ನರಶಸ್ತ್ರ ಚಿಕಿತ್ಸೆ, ಸುಟ್ಟಗಾಯ, ಚಿಕ್ಕಮಕ್ಕಳ ಶಸ್ತ್ರ ಚಿಕಿತ್ಸೆ, ಮತ್ತು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರು. ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9844366188 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement