ಇಂದು ಸಮಾರೋಪ
ನರಗುಂದ: ಬಸವ ಕೇಂದ್ರ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಶಿಕ್ಷಣದ ವಚನಾಮೃತ ಸಮಾರೋಪ ಸಮಾರಂಭ ಆ. 22ರ ಸಂಜೆ 6ಕ್ಕೆ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಜರಗಲಿದೆ. ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ವಿರಕ್ತಮಠದ ಚನ್ನಬಸವ ಶ್ರೀಗಳು, ತಪೋತಾಣ ಪುಣ್ಯಾರಣ್ಯ ಪತ್ರೀವನ ಮಠದ ಸಿದ್ಧವೀರ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಬಸವ ಕೇಂದ್ರ ಅಧ್ಯಕ್ಷ ಸಿ.ಎಚ್. ಕೋರಿ, ಸಮನ್ವಯಾಧಿಕಾರಿ ಪಿ.ಎಫ್. ಸೋಲಾಪುರಿ, ಚನನಬಸ್ಪ ಕಂಠಿ, ಎಸ್.ಜಿ. ಮಣ್ಣೂರಮಠ, ಟಿ.ಆರ್. ಉಳ್ಳಾಗಡ್ಡಿ, ಬಿ.ವೈ. ಕಲ್ಲನಗೌಡ್ರ, ಶಾಂತಕುಮಾರ ಭಜಂತ್ರಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಕಲ್ಯಾಣ ದಿನ
ನರಗುಂದ: ಸದ್ಭಾವನಾ ದಿನದ ಅಂಗವಾಗಿ ಆ. 22ರ ಬೆಳಗ್ಗೆ 10ಕ್ಕೆ ಪಟ್ಟಣದ ಉರ್ದು ಪ್ರೌಢ ಶಾಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ದಿನ ಆಚರಿಸಲಾಗುವುದು. ತಹಸೀಲ್ದಾರ್ ವೆಂಕನಗೌಡ ಪಾಟೀಲ, ಮುಖ್ಯೋಪಾಧ್ಯಾಯ ಬಿ.ವಿ. ಜಾಧವ್, ಸಿಪಿಐ ಪ್ರಶಾಂತ ಸಿದ್ದನಗೌಡ್ರ, ತಾಪಂ ಅಧಿಕಾರಿ ಬಿ.ವಿ. ಪಾಟೀಲ, ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಎನ್. ಮಂಜುನಾಥ ಮುಂತಾದವರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಆರಾಧನೆ
ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ರಾಘವೇಂದ್ರತೀರ್ಥ ಗುರುಸಾರ್ವಭೌಮರ 342ನೇ ಆರಾಧನಾ ಮಹೋತ್ಸವ ಆ. 22ರ ಜರಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಕ್ರೀಡಾಕೂಟ
ಮಂಡರಗಿ: ಪಟ್ಟಣದ ಜ.ಅ.ವಿ. ಸಮಿತಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಆಶ್ರಯದಲ್ಲಿ ಆ. 22ರಂದು ಬೆಳಗ್ಗೆ 8.30ಕ್ಕೆ ಮುಂಡರಗಿ ಶಹರ ಗ್ರುಪ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯುವುದು. ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸುವರು. ಶಾಸಕ ರಾಮಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಶಾಲೆಯ ಚೇರ್‌ಮನ್ ಡಾ. ಎ.ಎಂ. ಮೇಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಿಇಒ ಎಂ.ಎ. ರಡ್ಡೇರ, ದೈಹಿಕ ಶಿಕ್ಷಣಾ ಪರಿವೀಕ್ಷಕ ಜೆ.ಎಚ್. ಡೊಂಬರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಡಾ. ಪ್ರಕಾಶ ಹೊಸಮನಿ, ದಾನಿಗಳಾದ ರಾಜಶೇಖರ ಮೇಟಿ, ಯಲ್ಲಪ್ಪ ಗಣಾಚಾರಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.