ನಾಳೆ ಷಷ್ಟ್ಯಬ್ಧಿ ಅಭಿನಂದನಾ ಸಮಾರಂಭ
ಗಜೇಂದ್ರಗಡ: ಶೈಕ್ಷಣಿಕ, ಸಾಹಿತ್ಯ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ ಅಧ್ಯಕ್ಷ ಅಶೋಕ ಬಾಗಮಾರ ಷಷ್ಠ್ಯಬ್ಧಿ ಅಭಿನಂದನಾ ಸಮಾರಂಭವನ್ನು ಅವರ ಅಭಿಮಾನಿಗಳು ಆ. 23 ರಂದು ಬೆಳಗ್ಗೆ 10 ಗಂಟೆಗೆ ಆಚರಿಸಲು ನಿರ್ಧರಿಸಿದ್ದಾರೆಂದು ಷಷ್ಟ್ಯಬ್ಧಿ ಸೇವಾ ಸಮಿತಿ ಕಾರ್ಯದರ್ಶಿ ಅಜೀತ ಬಾಗಮಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಟ್ಟಣದಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ ಬಳಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯ ವಹಿಸುವರು. ಅಥಿತಿಗಳಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪಮೇಶ್ವರ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಗ್ರಾಮೀಣ ಮಂತ್ರಿ ಪ್ರದೀಪಜಿ ಜೈನ್ ಆದಿತ್ಯಾ, ಸಚಿವ ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ಎಂ.ಬಿ.ಪಾಟೀಲ, ಸಂತೋಷ ಲಾಡ್, ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಸಂಸ್ಥೆ ಅಧ್ಯಕ್ಷ ಡಾ. ವೇದಪ್ರಕಾಶಜಿ ತ್ಯಾಗಿ, ಶಾಸಕ ಜಿ.ಎಸ್. ಪಾಟೀಲ ಆಗಮಿಸುವರು.
ಅಶೋಕ ಬಾಗಮಾರ ಅಧ್ಯಕ್ಷತೆ ವಹಿಸುವರು. ವಿಪ ಸದಸ್ಯ ವೀರಣ್ಣಾ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ, ಶಾಸಕ ಬಸವರಾಜ ರಾಯರೆಡ್ಡಿ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಐ.ಜಿ. ಸನದಿ, ಮಾಜಿ ಸಚಿವ ಕಳಕಪ್ಪ ಬಂಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಸಂಸ್ಥೆ ಉಪಾಧ್ಯಕ್ಷ ನೇಮಿಚಂದ ಕೆವಿನಸಾರ್ ಹಾಜರಿರುವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಂಪಾಲಾಲ ಮೆಹತಾ, ಡಾ. ಪ್ರಸನ್‌ರಾವ್, ಡಾ. ಮೋಹನ ಆಳ್ವಾ, ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಜಿ.ಬಿ. ಪಾಟೀಲ, ಡಾ. ರಾಜಶೇಖರ ಗಾಣಿಗೇರ, ಎ.ಎಂ. ಗೌಡರ, ಡಾ. ಚಂದ್ರಪ್ಪ ಕೆಜಿಆರ್ ಪ್ರಸನ್‌ಚಂದಜಿ ಚೊರಡೈ, ಆರ್. ಶಾಂತಿಲಾಲಜಿ ಚೊರಡೈ, ಬಾಗಮಾರ ರತ್ನ ಅವಾರ್ಡ್ ಗೌತಮಚಂದ ಬಾಗಮಾರ, ದಯಾನಂದ ಸ್ವಾಮೀಜಿ, ರಾಜೇಂದ್ರಕುಮಾರ ಜೈನ್, ಮೇಘ ರಾಜಿ ಕವಾಡದ, ಶೈಲೇಶ ಬಾಗಮಾರ ಇತರರನ್ನು ಸನ್ಮಾನಿಸಲಾಗುವುದು. 2009ರಲ್ಲಿ ಹೊಳೆಆಲೂರ ಭಾಗದಲ್ಲಿ ಪ್ರವಾಹ ಬಂದಾಗ ಕಾಲೇಜು ವೈದ್ಯರೊಂದಿಗೆ ತೆರಳಿ ಸಂತ್ರಸ್ತರಿಗೆ ಬಟ್ಟೆ, ಆಹಾರ, ವೈದ್ಯಕೀಯ ಚಿಕಿತ್ಸೆ, ಬರ ಬಂದಾಗ ಅಶೋಕ ಬಾಗಮಾರ ಬಂಧುಗಳ ಜತೆಗೆ ರೈತರ ಅಸಂಖ್ಯಾತ ಜಾನುವಾರು ರಕ್ಷಿಸಿದ್ದಾರೆ ಎಂದರು.