ಬಂಧತ್ವಕ್ಕೆ ರಕ್ಷಾಬಂಧನ: ರಾಂಪುರ
ಕನ್ನಡಪ್ರಭ ವಾರ್ತೆ, ಗದಗ, ಆ. 21
ಸಹೋದರ-ಸಹೋದರಿಯರ ಬಂಧತ್ವಕ್ಕೆ ಪವಿತ್ರ ರಕ್ಷಾಬಂಧನ. ಬಂಧಿಖಾನೆಯ ವಿಚಾರಣಾಧೀನ ಖೈದಿಗಳು ತಮ್ಮ ಮನಪರಿವರ್ತನೆ ಮಾಡಿಕೊಂಡು ಅಪರಾಧವೆಸಗದೆ ಸಮಾಜದಲ್ಲಿ ಸಮಾನ ಮನಸ್ಕರಾಗಿ ಬಾಳಿ ಬದುಕಬೇಕೆಂದು ಸಾಮಾಜಿಕ ಕಾರ್ಯಕರ್ತ ರಾಮಣ್ಣ ರಾಂಪುರ ಹೇಳಿದರು.
ಅವರು ಬುಧವಾರ ನಗರದ ಉಪ ಕಾರಾಗೃಹದಲ್ಲಿ ನ್ಯೂ (ಇಂಡಿಯಾ) ಯುಥ್ಸ್ ಅಸೋಶಿಯೇಷನ್ ವತಿಯಿಂದ ವಿಚಾರಣಾಧೀನ ಖೈದಿಗಳಿಗೆ ರಕ್ಷಾಬಂಧನ ಕಟ್ಟುವ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯೂ (ಇಂಡಿಯಾ) ಯುಥ್ಸ್ ಅಸೋಶಿಯೇಷನ್ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಲಕ್ಕುಂಡಿ ಮಾತನಾಡಿ, 9 ವರ್ಷಗಳಿಂದ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದು ವಿಶೇಷ ಎಂದರು. ಪೂಜಾ ಬೇವೂರ, ಬಂಧೀಖಾನಿ ಅಧಿಕ್ಷಕ ಕೆ.ಎಸ್. ಮಾನ್ವಿ, ವಿದ್ಯಾಧರ ದೊಡ್ಡಮನಿ, ಅಕ್ಬರಲಿ ಇರಾನಿ ಮುಂತಾದವರು ಮಾತನಾಡಿದರು.
ಪ್ರಭಾವತಿ ಲಕ್ಕುಂಡಿ, ಅಕ್ಕಮ್ಮ ಬಾವಿಕಟ್ಟಿ, ನಜಿಮಾ ಇರಾಣಿ, ಸರಸ್ವತಿ ಲಕ್ಕುಂಡಿ, ಜಹಿರಾಬೇಗಂ ಗಾಡಗೋಳಿ, ಪ್ರಮೀಳಾ ಅಣ್ಣಿಗೇರಿ, ನೂರಜಾನ ಖಾದರನವರ, ರೇಖಾ ಕಮಡೊಳ್ಳಿ, ವೈಷ್ಣವಿ ಲಕ್ಕುಂಡಿ, ಜೆಸುದಾಸ್, ದ್ಯಾಮಣ್ಣ ಕಬಾಡಿ, ಮಾರುತಿ ಗೋಕಾವಿ, ನೀಲಪ್ಪ ಕೇಲೂರು, ಪರಶುರಾಮ ಶಾವಿ, ಆನಂದ ಹೂಲಿ, ನರೇಶ ಹುಣಸಿಮರದ, ರಾಘವೇಂದ್ರ ಹುಳ್ಳಿ, ರಾಘು ಮೇರವಾಡೆ, ಸುನೀಲ ಸಾತಪತ್ತಿ, ನಾರಾಯಣ ಪೂಜಾರ, ನೀತುಸಿಂಗ್ ಕಂಪ್ಲಿ, ಲಕ್ಷ್ಮಣ ಅಣ್ಣಿಗೇರಿ, ಪರಶುರಾಮ ಅಡಿಕೇರಿ, ಮಂಜು ಪಾಟೀಲ, ಸಂತೋಷ ಹಾಲಿವಿ, ದ್ಯಾಮಣ್ಣ ಕಬಾಡಿ, ಸುರೇಶ ಗುರ್ಲಹೊಸುರು, ವೈ.ವೈ. ಕಾಂಬಳೆ ಮುಂತಾದವರು ಇದ್ದರು. ಹನುಮಂತ ಗೆಜ್ಜಳ್ಳಿ ಸ್ವಾಗತಿಸಿದರು. ಆರ್.ಎಲ್. ಮೇಳೆನವರ ನಿರೂಪಿಸಿದರು. ಬೂದಪ್ಪ ಹುಣಸಿಮರದ ವಂದಿಸಿದರು.