ವಿಪ ಉಪ ಚುನಾವಣೆಗೆ ಸಿದ್ಧತೆ
ರೋಣ: ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆ. 22ರಂದು ಜರುಗಲಿರುವ ಉಪಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
33 ಮತಗಟ್ಟೆ ಸ್ಥಾಪಿಸಲಾಗಿದ್ದು, 33 ಮತಗಟ್ಟೆ ಅಧ್ಯಕ್ಷ ಅಧಿಕಾರಿ, 33 ಮತಗಟ್ಟೆ ಅಧಿಕಾರಿ, 14 ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದೆ. ಒಟ್ಟು 33 ಮತಗಟ್ಟೆಯಲ್ಲಿ 13 ಸೂಕ್ಷ್ಮ, 12 ಅತೀ ಸೂಕ್ಷ್ಮ, 8 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಚುನವಾಣೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಂದ ನೇಮಕಗೊಂಡ ಸಿಬ್ಬಂದಿ ತೆಗೆದುಕೊಂಡು ಹೋದರು. ಎಲ್ಲ ಮತಗಟ್ಟೆಗಳಿಗೆ ವಿಡಿಯೋ ಕ್ಯಾಮರಗಳನ್ನು ಅಳವಡಿಲಾಗಿದೆ ಎಂದು ಚುನಾವಣೆ ವಿಭಾಗ ಅಧಿಕಾರಿ ಎನ್.ಆರ್. ಜೋಶಿ ತಿಳಿಸಿದರು.
ಚುನಾವಣೆಯಲ್ಲಿ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆಯಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಸಲಾಗಿದೆ. 1 ಸಿಪಿಐ, 3 ಪಿಎಸ್‌ಐ, 6 ಎಎಸ್‌ಐ, 25 ಹವಾಲ್ದಾರ್ ಪೊಲೀಸ್ ಸೇರಿದಂತೆ 2 ಡಿಆರ್ ವಾಹನವನ್ನು ನಿಯೋಜಿಸಲಾಗಿದೆ ಎಂದು ರೋಣ ಸಿಪಿಐ ಮಲ್ಲನಗೌಡ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.