ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸ್ವಕುಳಸಾಳಿ ಸಮಾಜ ಸಂಘಟನೆಗೆ ಕರೆ

Lingaraj Badiger
Updated On : 22 Aug 2013, 11:30 am

ಕನ್ನಡಪ್ರಭ ವಾರ್ತೆ, ಗದಗ, ಆ. 21
ಸ್ವಕುಳಸಾಳಿ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರದ ಸವಲತ್ತು ಪಡೆಯಲು ಸಮಾಜವು ಶಿಕ್ಷಣದೊಂದಿಗೆ ಸಂಘಟಾತ್ಮಕವಾಗಿ ಬಲಿಷ್ಠಗೊಳ್ಳಬೇಕಾಗಿದೆ ಎಂದು ಜಿಹ್ವೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷ ವಿಠ್ಠಲ ದಿವಟೆ ಹೇಳಿದರು.
ಅವರು ಈಚೆಗೆ ನಗರದ ರಾಚೋಟೇಶ್ವರ ದೇವಸ್ಥಾನದಲ್ಲಿ ಸ್ವಕುಳಸಾಳಿ ಸಮಾಜದ ಮೂಲ ಪುರುಷ ಭಗವಾನ ಜಿಹ್ವೇಶ್ವರ ಜಯಂತ್ಯುತ್ಸವ ಹಾಗೂ ತೊಟ್ಟಿಲೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತರೇ ಸಮಾಜದೊಂದಿಗೆ ಹೋಲಿಸಿದಾಗ ಸ್ವಕುಳಸಾಳಿ ಸಮಾಜವು ತೀರಾ ಹಿಂದುಳಿದಿದ್ದು, ಗುರು-ಹಿರಿಯರು ಮಾರ್ಗದರ್ಶನದೊಂದಿಗೆ ಯುವಕರು ಸಮಾಜ ಸಂಘಟಿಸುವಲ್ಲಿ ಮುಂದೆ ಬರಬೇಕು ಎಂದರು.
ನಗರಸಭೆ ಸದಸ್ಯ ಸಂತೋಷ ಮೇಲಗಿರಿ ಮಾತನಾಡಿ, ಸಮಾಜಕ್ಕೆ ನಗರಸಭೆಯಿಂದ ಸಿಗುವ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಹರೀಶ ಸರ್ವದೆ, ನಗರಸಭೆ ಸದಸ್ಯ ಬರಕತಅಲಿ ಮುಲ್ಲಾ, ಕೀಶನ ಮೇರವಾಡೆ, ಡಾ. ದತ್ತಾತ್ರೆಯ ವೈಕುಂಠೆ ಪ್ರಾಸ್ತಾವಿಕ ಮಾತನಾಡಿದರು.
ಎಸ್‌ಬಿಐ ಅಧಿಕಾರಿ ಹರೀಶ ಸರ್ವದೆ ಕಾರ್ಯಕ್ರಮ ಉದ್ಘಾಟಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಕೆಂದೂಳಿ, ಕಾರ್ಯದರ್ಶಿ ನಾಗರಾಜ ಏಕಬೋಟೆ, ಮಂಜುನಾಥ ವಾಂಜ್ರೆ, ನಾರಾಯಣ ಏಕಬೋಟೆ, ಪಂಪಾಪತಿ ಶೇಂದ್ರೆ, ರವಿ ಏಕಬೋಟೆ, ಸುರೇಶ ಸಾಕ್ರೆ, ನಾಗರಾಜ ಲೋಣಕರ್, ಪ್ರದೀಪ ಸರ್ವದೆ, ಸಂತೋಷ ರೋಖಡೆ ಮುಂತಾದವರು ಇದ್ದರು. ಪ್ರಕಾಶ ಶೇಂದ್ರೆ ಸ್ವಾಗತಿಸಿದರು. ವಿಠ್ಠಲ ಸಪಾರೆ ನಿರೂಪಿಸಿದರು. ರವಿ ಶೇಂದ್ರೆ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಸ್ವಕುಳಸಾಳಿ ಸಮಾಜದ ಮಹಿಳೆಯರಿಂದ ಭಗವಾನ ಜಿಹ್ವೇಶ್ವರ ತೊಟ್ಟಿಲೋತ್ಸವ ಹಾಗೂ ವಿಶೇಷ ಪೂಜೆ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement