ಹೃದಯ ಚಿಕಿತ್ಸೆಗೆ ವೆಂಕನಗೌಡ ಗೋವಿಂದಗೌಡ್ರ ನೆರವು
ಗದಗ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಯಂಗ್ ಇಂಡಿಯಾ ಹಾಗೂ ಎಸ್.ಆರ್. ಇನ್ಪೋಟೆಕ್ ಸಹಯೋಗದಲ್ಲಿ ನಡೆದ ನಾರಾಯಣ ಹೃದಾಯಲಯದ ಹೃದಯ ತಪಾಸಣೆಯಲ್ಲಿ ತೀವ್ರ ಹೃದಯ ರೋಗದಿಂದ ಬಳಲುತಿದ್ದ ಬಡ ಕುಟುಂಬದ ನರಸಪ್ಪ ಜುಮ್ಮಿವಳಿ ಅವರ ವೈದ್ಯಕೀಯ ವೆಚ್ಚವನ್ನು ಯಂಗ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಭರಿಸುವುದಾಗಿ ತಿಳಿಸಿದ್ದು, ಚಿಕಿತ್ಸೆಯ ವೆಚ್ಚದ ಚೆಕ್‌ನ್ನು ಸಚಿನ್ ಪಾಟೀಲರ ಮುಖಾಂತರ ನರಸಪ್ಪ ಜುಮ್ಮಿವಳಿಯವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಯಂಗ್ ಇಂಡಿಯಾದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ, ವೀರೇಶ ಕಮ್ಮಾರ, ರಫೀಕ ಜಮಾಲಖಾನ, ಗಂಗಾಧರ ಬ್ಯಾಗೋಟಿ, ಪ್ರಶಾಂತ ಹೊಸಳ್ಳಿ, ಈರಣ್ಣ ಗೆಜಳ್ಳಿ, ಇಲಿಯಾಸ್ ಖೈರಾತಿ, ಮಂಜುನಾಥ ಮುಂಡರಗಿ, ರಾಜು ಬಳಿಗೇರ, ಗಂಗಾಧರ ಬೆನ್ನಾಳಮಠ ಮುಂತಾದವರು ನರಸಪ್ಪ ಜುಮ್ಮಿವಳಿಯವರಿಗೆ ಗುಣಮುಖರಾಗುವಂತೆ ಹಾರೈಸಿದರು.