ಅಭಿಮಾನಿಗಳಿಂದ ಎತ್ತರಕ್ಕೆ ಬೆಳೆಯಲು ಸಾಧ್ಯ: ನಟ ವಿಜಯ್
ಲಕ್ಷ್ಮೇಶ್ವರ: ತಾಯಿಯ ಋಣ ತೀರಿಸಲು ಒಂದು ಜನ್ಮದಿಂದ ಸಾಧ್ಯವಿಲ್ಲ. ಅದಕ್ಕಾಗಿ ತಾಯಿಯ ಬಗ್ಗೆ ಉತ್ತಮವಾದ ಸಿನಿಮಾ ತಯಾರಿಸಿದ್ದೇವೆ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರವಾಗಿದ್ದು, ಸಿನಿಮಾ ಅಭಿಮಾನಿಗಳಿಂದ ಮಾತ್ರ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಚಿತ್ರನಟ ದುನಿಯಾ ವಿಜಯಹೇಳಿದರು.
ಈಚೆಗೆ ಪಟ್ಟಣದ ಕೃಷ್ಣಾ ಚಿತ್ರಮಂದಿರದಲ್ಲಿ ಪ್ರದರ್ಶಿತವಾಗುತ್ತಿರುವ 'ಜಯಮ್ಮನ ಮಗ' ಚಿತ್ರದ ಪ್ರಚಾರರ್ಥ ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿತ್ರದ ಮೂಲಕ ಸಮಾಜಕ್ಕೆ ಮನರಂಜನೆ ಜೊತೆಯಲ್ಲಿ ಉತ್ತಮ ಸಂದೇಶ ನೀಡುವ ಕಾರ್ಯವನ್ನು ಮಾಡಿದ್ದೇವೆ. ತಾಯಿ ಪ್ರೀತಿ ಕುರಿತು ಹಲವಾರು ಸಿನಿಮಾಗಳು ಬಂದಿದ್ದರೂ ನಮ್ಮ ಚಿತ್ರ ಭಿನ್ನವಾಗಿದೆ. ಅಭಿಮಾನಿಗಳು ಚಿತ್ರ ವೀಕ್ಷಿಸಿ ಆಶೀರ್ವಾದ ಮಾಡಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭ ಪರಶುರಾಮಸಾ ಬದಿ, ಮಹೇಶ ಹೊಗೆಸೊಪ್ಪಿನ, ಮಹಾಂತೇಶ ವಡಕಣ್ಣವರ, ಪ್ರೇಮ ಶೇಠ್, ರಂಗನಾಥಸಾ ಬದಿ, ಸತೀಶ ಮಾಂಡ್ರೆ, ಕಿರಣ ನಾಯಕ್ ಮತ್ತು ಚಿತ್ರ ತಂಡದ ಇತರರು ಹಾಜರಿದ್ದರು.