ಶರಣರ ಮಠದಲ್ಲಿ ಶಿವಾನುಭವ ಗೋಷ್ಠಿ
ಗದಗ: ತಾಲೂಕಿನ ಬಳಗಾನೂರದ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಈಚೆಗೆ 395ನೇ ಮಾಸಿಕ ಶಿವಾನುಭವ ಗೋಷ್ಠಿ ಜರುಗಿತು. ಸಾನ್ನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ಪ್ರೀತಿ ವಿಶ್ವಾಸಗಳಂತಹ ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವುದರ ಮೂಲಕ ಆದರ್ಶದ ಬದುಕನ್ನು ಬದುಕಿ ಜೀವನದಲ್ಲಿ ಸಾರ್ಥಕತೆ ಪಡೆಯಬೇಕು ಎಂದರು. ಅತಿಥಿಯಾಗಿದ್ದ ವಿಭೂತಿ ಮಾಸ ಪತ್ರಿಕೆಯ ಸಂಪಾದಕ ಅಂದಾನಪ್ಪ ವಿಭೂತಿ ಮಾತನಾಡಿ, ಮಕ್ಕಳಿಗೆ ಇಂದು ಉತ್ತಮ ಓದಿನ ಜತೆಗೆ ಉತ್ತಮ ಸಂಸ್ಕಾರ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಿದ್ದಪ್ಪ ವಗ್ಗನವರ, ಶಿವಾಜಿ ನಾಯ್ಕರ ಸಂಗೀತ ಕಾರ್ಯಕ್ರಮ, ಚನ್ನವೀರ ಶಾಸ್ತ್ರಗಳಿಂದ ವೇದ ಪಠಣ ಜರುಗಿತು. ಬಿ.ವೈ. ಡೊಳ್ಳಿನ ಸ್ವಾಗತಿಸಿದರು. ಕೆ.ಬಿ. ಕಂಬಳಿ ನಿರೂಪಿಸಿದರು. ಮಾರುತಿ ಹುಡೇದ ವಂದಿಸಿದರು.