ಶ್ರೀ ರಾಘವೇಂದ್ರರ ಆರಾಧನಾ ಮಹೋತ್ಸವ
ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿ ಗ್ರಾಮದಲ್ಲಿರುವ ರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರರ ಆರಾಧನಾ ಮಹೋತ್ಸವ ಭಾರಿ ಭಕ್ತ ಸಮೂಹದೊಂದಿಗೆ ಸಡಗರ, ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆಯಿಂದಲೇ ಶ್ರೀರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಕಾರ್ಯಕ್ರಮದ ಅಂಗವಾಗಿ ಶ್ರೀಗಳಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಯಿತು.
ಬುಧವಾರ ಬೆಳಗ್ಗೆಯಿಂದಲೆ ಪೂರ್ವಾರಾಧನೆ, ಗುರುವಾರ ಮಧ್ಯಾರಾಧನೆ ಜರುಗಿದವು. ಶುಕ್ರವಾರ ಬೆಳಗ್ಗೆ ರಥೋತ್ಸವ ಜರುಗಿತು. ಶ್ರೀ ರಾಘವೇಂದ್ರರ ರಥ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ-ವೈಭವಗಳೊಂದಿಗೆ ನೂರಾರು ಭಕ್ತ ಸಮೂಹದೊಂದಿಗೆ ವೈಭವದಿಂದ ನೆರವೇರಿತು.
ಈ ಸಂದರ್ಭದಲ್ಲಿ ಮುಖಂಡರಾದ ವಾಸುದೇವ ಶಿರೋಳ, ಡಾ ಇ.ಎಲ್. ನಾಡಿಗೇರ, ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ನಾಡಿಗೇರ, ಪ್ರದೀಪ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಗೋಪಾಲಚಾರಿ ಶಿರೋಳ, ನರಸಿಂಹ ಅದವಾನಿ, ವೆಂಕಟೇಶ ಕುಡುಪಲಿ, ಜಯತೀರ್ಥ ಅಧ್ಯಾಪಕ, ಭೀಮಣ್ಣ ಗುಂಡಾಭಟ್ರ, ಪ್ರಶಾಂತ ಕುಲಕರ್ಣಿ, ಡಿ.ಕೆ. ಜೋಶಿ, ವಿಜಯೇಂದ್ರ ಶಿರೋಳ, ವಿಜಯೇಂದ್ರ ಕಟ್ಟಿ, ಗೋಪಾಲಚಾರ ಕಟ್ಟಿ ಇತರರು ಪಾಲ್ಗೊಂಡಿದ್ದರು.
--
ವಿಜೃಂಭಣೆಯ ಗುರುಸಾರ್ವಭೌಮರ ರಥೋತ್ಸವ
ಮುಂಡರಗಿ: ಇಲ್ಲಿಯ ಇಲ್ಲೂರ ಅವರ ತೋಟದಲ್ಲಿರುವ ನಂಜನಗೂಡು-ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಈಚೆಗೆ ಭಕ್ತಿ ಶ್ರದ್ಧೆಯಿಂದ ಗುರುಸಾರ್ವಭೌಮರ ರಥೋತ್ಸವವು ಜರುಗಿತು. ಸ್ಥಳೀಯ ರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಭಕ್ತರ ಸಹಕಾರದಿಂದ ನಿರ್ಮಿಸಿದ್ದ ನೂತನ ರಥೋತ್ಸವವನ್ನು ಗಣ್ಯ ವರ್ತಕ ನಾರಾಯಣಪ್ಪ ಇಲ್ಲೂರ ಅವರು ರಾಯರಿಗೆ ಸಮರ್ಪಿಸಿದರು. ಎಸ್.ಎಸ್. ಪದಕಿ, ವೈ.ಎನ್. ಗೌಡರ, ರಮೇಶ ಭೂಮರಡ್ಡಿ, ಅಂದಪ್ಪ ಬೆಲ್ಲದ, ಕೊಟ್ರೇಶ ಅಂಗಡಿ, ರವೀಂದ್ರ ಉಪ್ಪಿನಬೆಟಗೇರಿ, ಹೇಮಂತಗೌಡ ಪಾಟೀಲ, ಈಶಣ್ಣ ಹಂಚಿನಾಳ, ರಘೋತ್ತಮ ಡಂಬಳ, ರಾಘವೇಂದ್ರ ಕುರಿಯವರ, ಲಿಂಗರಾಜಗೌಡ ಪಾಟೀಲ, ಮುದಕಪ್ಪ ಕುಂಬಾರ, ರಾಮು ಭಜಂತ್ರಿ, ಸುಧೀರ ಪದಕಿ, ರಾಘವೇಂದ್ರ ಕುಲಕರ್ಣಿ, ಶಮಂತಕಮಣಿ ಇಲ್ಲೂರ, ಮಠದ ವ್ಯವಸ್ಥಾಪಕ ಅಶೋಕ ನಂಜನಗೂಡ, ದೀಪಕುಮಾರ ಜೋಶಿ ಇದ್ದರು.