ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

Mainashree
Updated On : 25 Aug 2013, 12:42 pm

ಮುಂಡರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಂಡರಗಿ ತಾಲೂಕು ವತಿಯಿಂದ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮುಂಡರಗಿ ತಾಲೂಕನ್ನು ಶೀಘ್ರದಲ್ಲಿ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು, ರೈತರ ಸಾಲ ಸಂಪೂರ್ಣ ರದ್ದಾಗಬೇಕು, ಬರಗಾಲ ಇರುವುದರಿಂದ ದನಕರುಗಳಿಗೆ ಮೇವಿನ ಬ್ಯಾಂಕ್ ಸ್ಥಾಪಿಸಬೇಕು, ಸರ್ಕಾರದ ವನ್ಯ ಪ್ರಾಣಿಗಳಿಂದ ರೈತರಿಗೆ ಆದ ಬೆಳೆ ಹಾನಿ ಕೊಡುವಂತಾಗಬೇಕು.
ಅಲ್ಲದೆ, ಇಂತಹ ಎಲ್ಲಾ ವನ್ಯ ಪ್ರಾಣಿಗಳನ್ನು ವನ್ಯಧಾಮ ಇರುವಂತ ಸ್ಥಳಗಳನ್ನು ತಕ್ಷಣ ಸ್ಥಳಾಂತರಿಸುವಂತ ವ್ಯವಸ್ಥೆ ಆಗಬೇಕು, ಹೈದರ್‌ಬಾದ್ ಕರ್ನಾಟಕಕ್ಕೆ 371 ಕಲಂ ಜಾರಿಗೊಳಿಸಿದಂತೆ ಮುಂಡರಗಿ ತಾಲೂಕನ್ನು 371 ಕಲಂ ಜಾರಿಯಾಗಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಯ ಮನವಿಯನ್ನು ಸಲ್ಲಿಸಲಾಯಿತು. ಈ ಎಲ್ಲಾ ಬೇಡಿಕೆಗಳು 10 ದಿನಗಳೊಳಗಾಗಿ ಈಡೇರದಿದ್ದರೆ ಸೆಪ್ಟಂಬರ 9ರಂದು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಯನ್ನು ಶಿರಸ್ತಾರ ಆರ್.ಜಿ. ಬಾಲೆಹೋಸೂರ ಪಡೆದರು.
ರೈತ ಮುಖಂಡರಾದ ಕೆ.ಜಿ. ಶಾಂತಸ್ವಾಮಿ, ಶಿವಾನಂದ ಇಟಗಿ, ಚಂದ್ರಕಾಂತ ಉಳ್ಳಾಗಡ್ಡಿ, ಮ್ಲಲಿಕಾರ್ಜುನಗೌಡ ಸಂಕನಗೌಡ್ರ, ಎಚ್.ಎಂ. ಕುರಿ, ಗೋವಿಂದರಾಜ ಜೋಶಿ, ಕಪ್ಪತ್ತೆಪ್ಪ ಆರೇರ, ಸೋಮಪ್ಪ ಹೈತಾಪೂರ, ಅಲ್ಲಾಸಾಬ ಹೊಸಮನಿ, ಶರಣಪ್ಪ ಕುರಿ, ಶರಣಪ್ಪ ಕಂಬಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement