ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 25 Aug 2013, 12:43 pm

ಇಂದು ವಿದ್ಯುತ್ ವ್ಯತ್ಯಯ
ಗದಗ:
ಆ. 25ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಗದಗ ಶಹರದ 11 ಕೆವಿ ಮಾರ್ಗವನ್ನು ಸ್ಥಳಾಂತರಿಸುವ ಕೆಲಸವನ್ನು ಕೈಗೊಂಡಿರುವುದರಿಂದ ಗದಗ ಶಹರದ ಸರ್ವೋದಯ ಕಾಲನಿ, ಒಕ್ಕಲಗೇರಿ, ಹನುಮಾನಗರಡಿ, ವಿ.ಎನ್.ಟಿ. ರಸ್ತೆ, ಗಂಗಾಪುರ ಪೇಟೆ, ಡಿ.ಸಿ. ಮಿಲ್ ರಸ್ತೆ, ಸ್ಟೇಶನ್ ರಸ್ತೆ, ಜವುಳಗಲ್ಲಿ, ಶಹಪುರಪೇಟೆ, ವಕೀಲಚಾಳ, ಟ್ಯಾಗೋರ್ ರೋಡ್, ಗಾಂಧಿವೃತ್ತದ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಂಬಂಧಪಟ್ಟ ಗ್ರಾಹಕರು ಹಾಗೂ ಸಾರ್ವಜನಿಕರು ಪ್ರಕಟಣೆ ಗಮನಿಸುವಂತೆ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಜ್ಯೋತಿಯಾತ್ರೆ ಆಗಮನ
ಮುಂಡರಗಿ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಮರ ಜ್ಯೋತಿಯಾತ್ರೆ ಆ. 26ರಂದು ಮಧ್ಯಾಹ್ನ 2 ಗಂಟೆಗೆ ಮುಂಡರಗಿ ಪಟ್ಟಣಕ್ಕೆ ಆಗಮಿಸಲಿದೆ. ಅಂದು ಬೆಳಗ್ಗೆ ಡಂಬಳ, ಮೇವುಂಡಿ ಮಧ್ಯಾಹ್ನ 2 ಗಂಟೆಗೆ ಮುಂಡರಗಿ, ಅನಂತರ ಕಲಕೇರಿ ಮೂಲಕ ಬಾಗೇವಾಡಿಗೆ ತೆರಳಲಿದೆ. ಎಲ್ಲ ಸಮಾಜ ಬಾಂಧವರು ಆಗಮಿಸಬೇಕೆಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ದೇವಪ್ಪ ಕಂಬಳಿ, ಕಾರ್ಯದರ್ಶಿ ಡಿ.ಡಿ. ಮೊರನಾಳ ತಿಳಿಸಿದ್ದಾರೆ.
ಇಂದು ಸಭೆ
ಗದಗ:
ಆ. 25ರ ಮಧ್ಯಾಹ್ನ 3 ಗಂಟೆಗೆ ನಗರದ ಮಸಾರಿ ಭಾಗದಲ್ಲಿರುವ ವರಸಿದ್ಧಿ ಕೈಲಾಸ ದೇವಸ್ಥಾನದ ಸಭಾಭವನದಲ್ಲಿ ಮೊಬೈಲ್ ಮಾರಾಟಗಾರರ ಹಾಗೂ ರಿಪೇರಿಗಾರರ ಅಸೋಸಿಯೇಶನ್‌ನ ಸಭೆ ಕರೆಯಲಾಗಿದ್ದು, ಕಾರಣ ಎಲ್ಲ ಸದಸ್ಯರು ಮತ್ತು ಮೊಬೈಲ್ ಅಂಗಡಿಯ ಮಾಲೀಕರು ತಪ್ಪದೆ ಸಭೆಗೆ ಭಾಗವಹಿಸುವಂತೆ ಅಸೋಸಿಯೇಶನ್‌ನ ಅಧ್ಯಕ್ಷ ಶಂಕರ ಹೇಮರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯಾಚಾರ: ಖಂಡನೆ
ಮುಂಡರಗಿ: ಮುಂಬೈನ ಮಹಾಲಕ್ಷ್ಮೀ ಬಡಾವಣೆಯಲ್ಲಿ ಸುದ್ದಿಗಾಗಿ ತೆರಳಿದ್ದ ಪತ್ರಕರ್ತನನ್ನು ಕಟ್ಟಿಹಾಕಿ ಛಾಯಾಗ್ರಾಹಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆಯನ್ನು ಮುಂಡರಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಕೃತ್ಯವೆಸಗಿದ ದುಷ್ಕರ್ಮಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಿ ನ್ಯಾಯ ಒದಗಿಸಬೇಕೆಂದು ಸಂಘ ಆಗ್ರಹಿಸಿದೆ.
ಇಂದು ಬ್ಲಡ್ ಡೋನರ್ಸ್ ಸೊಸೈಟಿ ಉದ್ಘಾಟನೆ
ಗದಗ: ನಗರದ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ಆ. 25ರಂದು ಸಂಜೆ 5 ಗಂಟೆಗೆ ಗದಗ ಬ್ಲಡ್ ಡೋನರ್ಸ್ ಸೊಸೈಟಿ ಉದ್ಘಾಟನಾ ಸಮಾರಂಭ ಜರುಗಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ನೆರವೇರಿಸುವರು.
ಡಾ. ರಾಜಶೇಖರ ಪವಾಡಶೆಟ್ಟರ, ಶ್ರೀರಾಮ ಸೇನೆಯ ಉತ್ತರ ಪ್ರಾಂತದ ಉಪಾಧ್ಯಕ್ಷ ಗೌರಿಶಂಕರ ಮೋಟ್, ನಗರಸಭೆಯ ಮಾಜಿ ಸದಸ್ಯ ಮೋಹನ ಮಾಳಶೆಟ್ಟಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಗಜಾನನೋತ್ಸವ ಸಭೆ
ಗದಗ: ಗದಗ-ಬೆಟಗೇರಿ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳದ ಸಭೆಯನ್ನು ಆ. 25ರಂದು ಬೆಳಗ್ಗೆ 10.30 ಗಂಟೆಗೆ ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಕರೆಯಲಾಗಿದೆ.
ಗಣೇಶ ಚತುರ್ಥಿಯನ್ನು ಅರ್ಥಪೂರ್ಣವಾಗಿ ಆಚರಿಸುವುದು, ಗಣೇಶ ಮೂರ್ತಿ ವಿಸರ್ಜನೆ, ವಿಶೇಷ ಅಲಂಕಾರವುಳ್ಳ ಗಣೇಶ ಮೂರ್ತಿಗಳಿಗೆ ಬಹುಮಾನ ನೀಡುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.
ಸಭೆ ಅಧ್ಯಕ್ಷತೆಯನ್ನು ಬಸಣ್ಣ ಮಲ್ಲಾಡದ ವಹಿಸಲಿದ್ದು, ವಾಸಣ್ಣ ಹೆಬಸೂರ ಆಗಮಿಸಲಿದ್ದಾರೆ. ಗದಗ-ಬೆಟಗೇರಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘಗಳ ಪದಾಧಿಕಾರಿಗಳು ಸಭೆಗೆ ಹಾಜರಾಗಿ ಸಲಹೆ, ಸೂಚನೆ ನೀಡಬೇಕೆಂದು ಮಹಾಮಂಡಳದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಕಾರ್ಯಾಧ್ಯಕ್ಷ ಶಿವಣ್ಣ ಮುಳಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement