ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅತ್ಯಾಚಾರ ಖಂಡಿಸಿ ಪತ್ರಕರ್ತರಿಂದ ಮನವಿ

Mainashree
Updated On : 26 Aug 2013, 10:47 am

ಕನ್ನಡಪ್ರಭ ವಾರ್ತೆ, ಗದಗ, ಆ. 25
ಮುಂಬೈನಲ್ಲಿ ವರದಿಗೆ ತೆರಳಿದ್ದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರಗೈದ ಘಟನೆ ಸಮಾಜ ವಿರೋಧಿ ಹಾಗೂ ಇಡೀ ಸಮುದಾಯ ಬೆಚ್ಚಿ ಬೀಳಿಸುವಂತಹದ್ದು. ಇಂತಹ ಘಟನೆಯನ್ನು ಸಂಘ ಖಂಡಿಸುತ್ತದೆ. ಅಲ್ಲದೆ ಕೃತ್ಯ ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ ಸ್ವೀಕರಿಸಿದರು. ಈ ಸಂದರ್ಭ ಜರ್ನಲಿಸ್ಟ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಮಂಜುನಾಥ ಬಮ್ಮನಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ ಬಡಿಗೇರ, ಪತ್ರಕರ್ತ ಶಿವಕುಮಾರ ಕುಷ್ಟಗಿ, ಗಂಗಾಧರ ತಡಹಾಳ, ಕೆ.ಎಸ್. ಸುನಿಲ, ನೂರಹ್ಮದ್ ಮಕಾನದಾರ, ಹನುಮಾನಸಿಂಗ ಜಮಾದಾರ, ಗಣೇಶ ಪೈ, ರಾಜು ಹೆಬ್ಬಳ್ಳಿ, ವೆಂಕಟೇಶ ಇಮ್ರಾಪುರ, ರಮೇಶ ಭಜಂತ್ರಿ, ಮುಕ್ಕಣ್ಣ ಮಾದಗುಂಡಿ, ಛಾಯಾಗ್ರಾಹಕ ರಾಮು ವಗ್ಗಿ, ಬನ್ನೇಶ ಕುಲಕರ್ಣಿ, ಚನ್ನಯ್ಯ ಹಿರೇಮಠ, ವಿಜಯ ಎಸ್.ಕೆ, ವಿನಾಯಕ ಚೌಡಾಪುರ, ಯಚ್ಚರಪ್ಪ ಮಹೇಂದ್ರಕರ, ಶಂಕರ ಗುರಿಕಾರ ಇತರರಿದ್ದರು.
ಪತ್ರಿಕಾ ಭವನಕ್ಕೆ ಹೊಂಬಾಳಿ ಹೆಸರಿಡಲು ಆಗ್ರಹ: ಸರ್ಕಾರ ಗದಗ ನಗರದಲ್ಲಿ ನಿರ್ಮಿಸಿರುವ ಪತ್ರಿಕಾ ಭವನಕ್ಕೆ ಹಿರಿಯ ಪತ್ರಕರ್ತ, ಪತ್ರಕರ್ತರ ಸಂಘವನ್ನು ಜಿಲ್ಲೆಯಲ್ಲಿ ಬಲಗೊಳಿಸಿದ ದಿ. ಬದರಿನಾಥ ಹೊಂಬಾಳಿ ಅವರ ಹೆಸರು ಇಡುವಂತೆ ಆಗ್ರಹಿಸಿ ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಎಲ್ಲ ಪತ್ರಿಕೆಗಳ ವರದಿಗಾರರು, ಛಾಯಾಗ್ರಾಹಕರು, ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement