ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಏಕಾಗ್ರತೆ ಮೈಗೂಡಿಸಿಕೊಳ್ಳಿ

Mainashree
Updated On : 26 Aug 2013, 10:46 am

ಗಜೇಂದ್ರಗಡ: ಕ್ರಿಯಾಶೀಲತೆ, ಜತೆಗೆ ಏಕಾಗ್ರತೆಯಿಂದ ವಿದ್ಯೆ ಸಂಪಾದಿಸಿ ದೇಶದ ಹೆಮ್ಮಯ ಸತ್ಪ್ರಜೆಯಾಗಿ ಬಾಳಿ ಎಂದು ಮುಖ್ಯ ಗುರುಮಾತೆ ಎಂ.ಟಿ. ಕುಲಕರ್ಣಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತ್ತೀಚಿಗೆ ಸ್ಥಳೀಯ ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆಯಲ್ಲಿ ಶಿಲ್ಪಾ ಕೊಡೇಕಲ್ ಸ್ಮರಣಾರ್ಥ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರ ಅತ್ಯಂತ ಸ್ಪರ್ಧಾ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಬೇಕು. ಜತೆಗೆ ಶಿಕ್ಷಕರು, ಪಾಲಕರು ಅವರಿಗೆ ಬೆನ್ನೆಲುಬಾಗಿ ಸಹಕರಿಸಿದಾಗ ವಿದ್ಯಾರ್ಥಿ ಜೀವನದ ಗುರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಕಾಲಿಕ ನಿಧನ ಹೊಂದಿದ ನಮ್ಮ ಶಾಲಾ ವಿದ್ಯಾರ್ಥಿನಿ ಶಿಲ್ಪಾ ಕೊಡೇಕಲ್‌ರ ಸ್ಮರಣಾರ್ಥವಾಗಿ ಅವರ ಕುಟುಂಬದವರು ಅವಳ ನೆನಪು ಚಿರಸ್ಥಾಯಿಯಾಗಿರಲೆಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೆ.ಬಿ. ಚಾಗರಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಶಿಲ್ಪಾ ಕೊಡೇಕಲ್ ಸದ್ಗುಣಗಳನ್ನು ಮೈಗೂಡಿಸಿಕೊಂಡು ಶಿಕ್ಷಕರ ಹಾಗೂ ಪಾಲಕರ ಹೆಮ್ಮೆಯ ಪುತ್ರಿಯಾಗಿದ್ದಳು. ಅವಳ ಅಗಲಿಕೆ ನಮ್ಮೆಲ್ಲರಿಗೂ ನೋವುಂಟು ಮಾಡಿದೆ. ಈ ದಿಸೆಯಲ್ಲಿ ಅಂತಹ ವಿದ್ಯಾರ್ಥಿನಿ ಆದರ್ಶಗಳನ್ನು ರೂಢಿಸಿಕೊಳ್ಳಿ ಎಂದರು. ಅಗಲಿದ ವಿದ್ಯಾರ್ಥಿನಿಯ ಸವಿ ನೆನಪಿಗಾಗಿ ಕಳೆದ ಏಪ್ರಿಲ್‌ನಲ್ಲಿ ನಡೆದ 8, 9, 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಹಾಗೂ ಸ್ಮರಣ ಫಲಕ ನೀಡಲಾಯಿತು. ಈಶ್ವರಪ್ಪ ಕೊಡೇಕಲ್, ಸವಿತಾ ಕೊಡೆಕಲ್, ನಿವೃತ್ತ ಪ್ರಾಚಾರ್ಯ ವೈ.ಎ. ತೋಟಗಂಟಿ, ಎಸ್.ಎಸ್. ನರೇಗಲ್, ಎಂ.ವಿ. ನಾಡಗೇರ, ಎಂ. ಲಕ್ಷ್ಮೀದೇವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement