ಸುದ್ದಿ ಸಂಕ್ಷೇಪ
ಬಂಧನ ವಿರೋಧಿಸಿ ಇಂದು ಪ್ರತಿಭಟನೆ
ಗದಗ: ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ ಸಿಂಘಾಲ್ ಹಾಗೂ ಹಿರಿಯ ಧುರೀಣ ಡಾ ಪ್ರವೀಣಭಾಯಿ ತೊಗಾಡಿಯಾ, ವಿವಿಧ ಸಾಧು-ಸಂತರನ್ನು ಬಂಧಿಸಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ವಿರೋಧಿಸಿ ಆ. 26ರ ಸೋಮವಾರದಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮತ್ತು ಜಿಲ್ಲಾ ಬಜರಂಗದಳದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 10ಕ್ಕೆ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗುವುದು. ನೇತೃತ್ವವನ್ನು ಜಿಲ್ಲಾ ಬಜರಂಗ ದಳದ ಸಂಚಾಲಕ ಮಾರುತಿ ಪವಾರ ವಹಿಸುವರು. ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಶ್ರೀಧರ ಕುಲಕರ್ಣಿ ತಿಳಿಸಿದ್ದಾರೆ.
ವಿಗ್ರಹಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆಗೆ ಸೂಚನೆ
ಗದಗ: ಗಣೇಶ ಹಬ್ಬದ ಸಮಯದಲ್ಲಿ ವಿಗ್ರಹಗಳನ್ನು ವಿವಿಧ ಬಣ್ಣ ಹಾಗೂ ವಿವಿಧ ಲೋಹ ಮತ್ತು ಕಬ್ಬಿಣಗಳಿಂದ ತಯಾರಿಸುತ್ತಿದ್ದು, ಈ ವಿಗ್ರಹಗಳನ್ನು ಕೆರೆ, ಹೊಂಡ ನದಿಗಳಲ್ಲಿ ವಿಸರ್ಜನೆ ಮಾಡುವುದರಿಂದ ವಿಶೇಷವಾಗಿ ಪರಿಸರ ಮಾಲಿನ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲದೇ, ನೀರಿನಲ್ಲಿಯ ಜಲಚರ ಪ್ರಾಣಿಗಳಾದ ಮೀನು ಹಾಗೂ ಇತರೆ ಜೀವಿಗಳ ಜೀವಕ್ಕೆ ಅಪಾಯ, ಹಾಗೂ ಕುಡಿವ ನೀರು ಮಲಿನವಾಗುವುದರಿಂದ ಈ ವಿಗ್ರಹಗಳನ್ನು ಪ್ರತ್ಯೇಕ ಹೊಂಡ ತಯಾರಿಸಿ ವಿಸರ್ಜನೆಗೆ ವ್ಯವಸ್ಥೆಯನ್ನು ಆಯಾ ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಪಂಚಾಯತ್ ಕಾರ್ಯದರ್ಶಿಗಳು ಮಾಡಲು ಮಾರ್ಗದರ್ಶಿ ಹೊರಡಿಸಲಾಗಿದೆ. ಕಾರಣ ಗಣೇಶ ವಿಗ್ರಹಗಳ ವಿಸರ್ಜನೆಗೆ ಸ್ಥಳೀಯ ಸಂಸ್ಥೆಯವರು ಸೂಕ್ತ ಸ್ಥಳದ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದರಪಟ್ಟಿ ಆಹ್ವಾನ
ಗದಗ:ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಅಗತ್ಯವಿರುವ ಖಛಟಡ್ಡಟ್ಜಿ ಈಔ್ಗ3175ಋಃ ್ಛ್ಟಟ್ಟ್ಠ ಟಛಡಜ್ಠ ಟ್ಡಟಡ್ಝಿಜ್ಡಿಟ್ಛಿಡ್ಝ್ಟಿಟಿ ಠ್ಠ್ಝಟಿಡಿಜ್ಠ ಅಥವಾ ಈಔಆಖಖ ಂಋ 3010 ಆಔಔ-್ಝಟಿ-್ಟಟಿಜ ಔಛಡಜ್ಠ ಕ್ಠ್ಝಿಟಿಡಿಜ್ಠ ಮಾದರಿಯ ಪ್ರಿಂಟರನ್ನು ಖರೀದಿಸಬೇಕಾಗಿದ್ದು, ಆಸಕ್ತ ಸರಬರಾಜುದಾರರಿಂದ ದರಪಟ್ಟಿಯನ್ನು ಕರೆಯಲಾಗಿದೆ. ಅಧಿಕೃತ ಸರಬರಾಜುದಾರರು ಆ. 30 ಮಧ್ಯಾಹ್ನ 3 ಗಂಟೆಯೊಳಗೆ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆಡಳಿತ ಭವನ, ರೂ. ನಂ. 6 ಗದಗ ಇವರಿಗೆ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ಸಲ್ಲಿಸಲು ಕೋರಲಾಗಿದೆ. ಲಕೋಟೆಯ ಮೇಲೆ ಡಿಜಿಟಲ್ ಪ್ರಿಂಟರ್ ಸರಬರಾಜಿಗಾಗಿ ದರಪಟ್ಟಿ ಎಂದು ನಮೂದಿಸುವುದು. ಆ. 30 ರಂದು ಮಧ್ಯಾಹ್ನ 4 ಗಂಟೆಗೆ ಹಾಜರಿರುವ ಕೋಟೇಶನ್ದಾರರ ಸಮ್ಮುಖದಲ್ಲಿ ಲಕೋಟೆಗಳನ್ನು ತೆರೆಯಲಾಗುವುದು ಎಂದು ಗದಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.