ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ: ರಾಯಣ್ಣ ಜ್ಯೋತಿಯಾತ್ರೆಗೆ ಸ್ವಾಗತ

Lingaraj Badiger
Updated On : 27 Aug 2013, 11:36 am

ಮುಂಡರಗಿ:  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಮರ ಜ್ಯೋತಿಯಾತ್ರೆ ಸೋಮವಾರ ಮುಂಡರಗಿ ಪಟ್ಟಣಕ್ಕೆ ಆಗಮಿಸಿತು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ದೇವಪ್ಪ ಕಂಬಳಿ, ಕಾರ್ಯದರ್ಶಿ ಡಿ.ಡಿ. ಮೋರನಾಳ ಜ್ಯೋತಿಯಾತ್ರೆಯನ್ನು ಬರಮಾಡಿಕೊಂಡಿರು. ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹೇಮಂತಗೌಡ ಪಾಟೀಲ್, ಧ್ರುವಕುಮಾರ ಹೊಸಮನಿ, ರಾಮಣ್ಣ ಬಳ್ಳಾರಿ, ಆನಂದಗೌಡ ಪಾಟೀಲ, ಕೊಟ್ರೇಶ ಅಂಗಡಿ, ರವೀಂದ್ರ ಉಪ್ಪಿನಬೆಟಗೇರಿ, ಅಬ್ದುಲ್ ಹಣಗಿ, ಫಕ್ರುಸಾಬ್ ಹಾರೋಗೇರಿ, ಬಿ.ಎಸ್. ಮೇಟಿ, ರವಿ ದಂಡಿನ್, ಶಿವನಗೌಡ ಗೌಡ್ರ, ಚಂದ್ರಹಾಸ ಉಳ್ಳಾಗಡ್ಡಿ, ಬಸವರಾಜ ರಾಮೇನಹಳ್ಳಿ, ರಾಘವೇಂದ್ರ ಕುರಿಯವರ, ಬಸವರಾಜ ಬಿಸನಳ್ಳಿ, ಯಲ್ಲಪ್ಪ ಗಣಾಚಾರಿ, ಗ್ಯಾಣಪ್ಪ ಶೀರಿ, ವೀರೇಶ ಸಜ್ಜನರ, ವಿಜಯಕುಮಾರ ಶಿಳ್ಳಿನ, ಶೇಖರ ಜುಟ್ಲನ್ನವರ, ಎ.ಪಿ. ದಂಡಿನ್, ಶೇಖರಾಜ ಹೊಸಮನಿ, ಲೋಕೇಶ ದೊಡ್ಡಮನಿ, ಶರಣಪ್ಪ ಕುಬಸದ ಉಪಸ್ಥಿತರಿದ್ದರು. ಬೆಳಗ್ಗೆ ಡಂಬಳ, ಮೇವುಂಡಿಗೆ ಆಗಮಿಸಿ ಅನಂತರ ಮುಂಡರಗಿಗೆ ಆಗಮಿಸಿ ಇಲ್ಲಿಂದ ಕಲಕೇರಿ ಮೂಲಕ ಬಾಗೇವಾಡಿಗೆ ತೆರಳಿತು.
--
ಚನ್ನಮ್ಮ, ರಾಯಣ್ಣ ಹೆಸರಲ್ಲಿಯೇ ದೇಶಭಕ್ತಿ
ಗದಗ: ಕಿತ್ತೂರ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಹೆಸರಲ್ಲಿಯೇ ದೇಶಾಭಿಮಾನ ತುಂಬಿ ತುಳುಕುತ್ತಿದೆ. ಇಂತಹ ಸ್ವಾತಂತ್ರ್ಯ ಸೇನಾನಿಗಳ ಬಲಿದಾನ ನೆನಪಿಸಿಕೊಂಡರೆ ಮನಸ್ಸಿನಲ್ಲಿ ರಾಷ್ಟ್ರಾಭಿಮಾನ ಉಕ್ಕಿ ಹರಿಯುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಪಟು ಸುನೀಲ ಜೋಶಿ ಹೇಳಿದರು.
ಅವರು ಸೋಮವಾರ ನಗರದ ರಾಯಣ್ಣ ವೃತ್ತದಲ್ಲಿ ಬೆಳಗಾವಿಯ ನಂದಗಡದಿಂದ ಆಗಮಿಸಿದ ಸಂಗೊಳ್ಳಿ ರಾಯಣ್ಣನ ಅಮರ ಜ್ಯೋತಿ ಜಾಥಾವನ್ನು ಬರಮಾಡಿಕೊಂಡು ಮಾತನಾಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಪರರಿಗಾಗಿ ಬದುಕುವುದರಲ್ಲಿ ತ್ಯಾಗವಿದೆ. ಸಂಗೊಳ್ಳಿ ರಾಯಣ್ಣ ಎಂದಿಗೂ ತನಗಾಗಿ ತನ್ನ ಅಧಿಕಾರಕ್ಕಾಗಿ ಬದುಕಲಿಲ್ಲ. ನಾಡಿಗೆ ಸ್ವಾತಂತ್ರ್ಯ ದೊರಕಿಸಿಕೊಡಲು ತನ್ನ ಪ್ರಾಣ ತ್ಯಾಗ ಮಾಡಿದ್ದಾನೆ ಎಂದರು. ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ ಡಾ. ಬಿ.ಎಫ್. ದಂಡಿನ, ವಾಸಣ್ಣ ಕುರಡಗಿ, ಶಿವಲೀಲಾ ಅಕ್ಕಿ ಮಾತನಾಡಿದರು. ಅಶೋಕ ಬಣ್ಣದ, ಶೇಖಣ್ಣ ಅಗಸಿಮನಿ, ಅನಿಲ ಸಿಂಗಟಾಲಕೇರಿ, ಹುಚ್ಚಣ್ಣ ಶ್ಯಾಪುರ, ಬಿ.ಎಫ್. ಕಂಬಳಿ, ನಾಗರಾಜ ಮೆಣಸಗಿ, ಡಿ.ಎಲ್. ಗುರಿಕಾರ, ರವಿ ಜೋಗಿನ, ಅರುಣ ಅಣ್ಣಿಗೇರಿ, ಬಿ.ಎಚ್. ಚಕ್ರಣ್ಣವರ, ವೈ.ಕೆ. ಚೌಡಾಪುರ, ಸಂಜಯ ಸಿಂದಿಗೇರಿ, ಮೋಹನ ಇಮರಾಪುರ, ಮಹಾಂತೇಶ ಅರಗಂಜಿ, ಶರಣಪ್ಪ ಸಾಸನೂರ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್, ಯುವ ಭಾರತ ಹಾಗೂ ಗದಗ ಯುಥ್ಸ್ ಅಸೋಶಿಯೇಶನ್ ಸದಸ್ಯರು ಉಪಸ್ಥಿತರಿದ್ದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು. ರವಿ ದಂಡಿನ ಜಾಥಾ ಕುರಿತು ಮಾತನಾಡಿದರು. ಡಾ. ಎಸ್.ಬಿ. ಗೋವಿಂದಪ್ಪನವರ ನಿರೂಪಿಸಿದರು. ಲಿಂಗರಾಜ ಬಗಲಿ ವಂದಿಸಿದರು. ಇದಕ್ಕೂ ಮೊದಲು ಜ್ಯೋತಿ ಜಾಥಾವನ್ನು ಹಾತಲಗೇರಿ ನಾಕಾದಿಂದ ನಗರಸಭೆಯ ವೃತ್ತದವರೆಗೆ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಕರೆ ತಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement