ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸತತ ಪರಿಶ್ರಮದಿಂದ ಕ್ರೀಡೆಯಲ್ಲಿ ಯಶಸ್ಸು: ಸುನೀಲ ಜೋಶಿ

Lingaraj Badiger
Updated On : 27 Aug 2013, 11:36 am

ಗದಗ: ಕ್ರೀಡೆಯಲ್ಲಿ ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಕ್ರಿಕೆಟಿಗ ಸುನೀಲ ಜೋಶಿ ಹೇಳಿದರು.
ಅವರು ಸೋಮವಾರ ಜಿಲ್ಲಾ ಕ್ರೀಡಾಂಗಣದಲ್ಲಿ 2013-14ನೇ ಸಾಲಿನ ಗದಗ ಗ್ರಾಮೀಣ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಗುಡ್ಲಾನೂರ ವಹಿಸಿದ್ದರು. ಕ್ರೀಡಾ ಧ್ವಜಾರೋಹಣವನ್ನು ಉಪನಿರ್ದೇಶಕರ ಕಾರ್ಯಾಲಯದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ ನೆರವೇರಿಸಿದರು. ವಿ.ವಿ. ನಡುವಿನಮನೆ ಸಮನ್ವಯ ಅಧಿಕಾರಿಗಳು, ಡಿ.ಎಸ್. ತಳವಾರ, ಬಿ.ಎಚ್. ಚಕ್ರಣನವರ, ಜಿ.ಎಚ್. ಪೂಜಾರ, ಎಸ್.ಡಿ. ಮಾದರ ಹಾಗೂ ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಪಟು ಕುಮಾರ ಆದಿತ್ಯ ಜೋಶಿ ಉಪಸ್ಥಿತರಿದ್ದರು. ಎಲ್ಲ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಶ್ರೀ ಎಸ್.ಎಸ್. ತಳಿಹಾಳ ಬೋಧಿಸಿದರು. ಶ್ರೀಮತಿ ಶಾರದಾ ಬಂಡಿಯವರ ಪ್ರಾರ್ಥಿಸಿದರು. ಬಿ.ಎಸ್. ಲೂತಿಮಠ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಎಲ್ಲರನ್ನೂ ಸ್ವಾಗತಿಸಿದರು. ಜಿ.ಎಚ್. ಪೂಜಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement