ಕೃಷಿ ವಿಮೆ: 31 ಕೊನೆಯ ದಿನ
ಗದಗ: ಪ್ರಸಕ್ತ 2013ನೇ ಸಾಲಿನ ಮುಂಗಾರು ಹಂಗಾಮಿಗೆ ಗದಗ ಜಿಲ್ಲೆಯಲ್ಲಿ ಯೋಜನೆ ಜಾರಿಯಲ್ಲಿದ್ದು, ಹೋಬಳಿ ಮಟ್ಟಕ್ಕೆ ನಿರ್ದೇಶಿತ ನೀರಾವರಿ ಬೆಳೆಗಳಾದ ಭತ್ತ, ಜೋಳ, ಗೋವಿನಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ಮಳೆ ಆಶ್ರಿತ ಬೆಳೆಗಳಾದ ಭತ್ತ, ಜೋಳ, ಗೋವಿನಜೋಳ, ಸಜ್ಜೆ, ನವಣೆ, ತೊಗರಿ, ಹೆಸರು, ಹುರುಳಿ, ಸೂರ್ಯಕಾಂತಿ, ಎಳ್ಳು, ಶೇಂಗಾ ಬೆಳೆಗಳನ್ನು ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೆ ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ, ನಾಟಿ ಮಾಡಿದ ನಂತರ 30 ದಿನದೊಳಗಿನ ಬೆಳೆಗಳಿಗೆ ವಿಮಾ ಕಂತು ಕಟ್ಟಿ ಅರ್ಜಿಯನ್ನು ಸಲ್ಲಿಸಬೇಕು. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಮಾ ಕಂತಿನ ಮೇಲೆ ಶೇ. 10ರ ಸಹಾಯಧನ ಇರುವುದು. ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ಆ. 31 ಕೊನೆಯ ದಿನವಾಗಿದ್ದು, ಕಾರಣ ಎಲ್ಲ ರೈತರು ಆ. 31ರ ಒಳಗೆ ಬ್ಯಾಂಕಿಗೆ ತೆರಳಿ ವಿಮೆ ಮಾಡಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.