ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೋಣದಲ್ಲೂ ಭವ್ಯ ಸ್ವಾಗತ

Mainashree
Updated On : 29 Aug 2013, 10:50 am

ರೋಣ: ಸ್ವಾಮಿ ವಿವೇಕಾನಂದರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ರಾಜ್ಯಾದಂತ ಕೈಗೊಳ್ಳಲಾದ ವಿವೇಕಾನಂದ ರಥ ಯಾತ್ರೆಯು ನರಗುಂದ ಪಟ್ಟಣದಿಂದ ರೋಣ ಪಟ್ಟಣಕ್ಕೆ ಮಂಗಳವಾರ ಸಂಜೆ ಆಗಮಿಸುತ್ತಿದಂತೆ ಪಟ್ಟಣದ ಪೋತದಾರರಾಜನ ಕಟ್ಟೆ ಹತ್ತಿರ ಭವ್ಯವಾಗಿ ಸ್ವಾಗತಿಸಲಾಯಿತು.
ರಥಯಾತ್ರೆಯಲ್ಲಿನ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಶಾಸಕ ಜಿ.ಎಸ್.ಪಾಟೀಲ, ಗುಲಗಂಜಿ ಮಠದ ಗುರಪಾದ ಶ್ರೀಗಳು ಹೂ ಮಾಲೆ ಹಾಕಿ ಸ್ವಾಗತಿಸಿದರು. ವಿ.ಎಫ್.ಪಾಟೀಲ ಪ್ರೌಢಶಾಲೆ ಆವರಣದಿಂದ ಪ್ರಾರಂಭವಾದ ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಡೊಳ್ಳು, ಜಾಂಜಮೇಳ ಮತ್ತು ವಿವೇಕ ಜೈ ಘೋಷ ಮುಗಿಲು ಮುಟ್ಟುವಂತಿತ್ತು.  ಈ ಸಂದರ್ಭದಲ್ಲಿ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ವಿವೇಕಾನಂದರ ಚಿಂತನೆ, ಸಿದ್ಧಾಂತಗಳು ದಾರಿ ದೀಪವಾಗುತ್ತವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement