ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ, ಭಾವಚಿತ್ರ ಮೆರವಣಿಗೆ, ಉತ್ಸಾಹದಿಂದ ಗಡಿಗೆ ಒಡೆದ ಯುವಕರು

Mainashree
Updated On : 30 Aug 2013, 10:44 am

ಗಜೇಂದ್ರಗಡ: ಸ್ಥಳೀಯ ಯಾದವ ಕುಲ ಶ್ರೀಕೃಷ್ಣ ಗೊಲ್ಲರ ಯುವಕ ಮಂಡಳ ವತಿಯಿಂದ ಗೋಕುಲಾಷ್ಟಮಿ ಪ್ರಯುಕ್ತ ಭಗವಾನ್ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ಗುರುವಾರ ಸಂಭ್ರಮದಿಂದ ನೆರವೇರಿತು.
ಪಟ್ಟಣದ ಗೊಲ್ಲರ ಓಣಿ ಶ್ರೀಯಾಧವ ಸಮುದಾಯ ಭವನದಿಂದ ಹೊರಟ ಶ್ರೀ ಕೃಷ್ಣನ ಭಾವ ಚಿತ್ರಹೊತ್ತ ಭವ್ಯ ಮೆರವಣಿಗೆಯಲ್ಲಿ ನೂರಾರು ಭಕ್ತರು ಭಜನೆ, ಝಾಂಜ್ ಮೇಳ ಜತೆಗೆ  ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಬೆಳಗ್ಗೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರಿಕ ಪೂಜೆ ಹಾಗೂ ಧಾರ್ಮಿಕ ವಿಧಾನಗಳ ಕಾರ್ಯ ನೆರವೇರಿಸುವ ಮೂಲಕ ಸದ್ಭಕ್ತರು ಸಡಗರದಿಂದ ಗೋಕುಲಾಷ್ಟಮಿ ಆಚರಿಸಿದರು. ಬಳಿಕ ಸಾಮೂಹಿಕ ಮಹಾ ಪ್ರಸಾದ ವಿತರಣೆ ನಡೆಯಿತು. ನೂರಾರು ಮಹಿಳೆಯರು ಆರತಿ ಮಾಡಿ ಉತ್ಸಾಹದಿಂದ ಶ್ರೀಕೃಷ್ಣನ ತೊಟ್ಟಿಲೋತ್ಸವ, ಮೊಸರು ಮಡಿಕೆ ಒಡೆಯುವ ಕಾರ್ಯಕ್ರಮ ನೆರವೇರಿಸಿದರು. ಪುರಸಭೆ ಸದಸ್ಯ ಕಳಕಪ್ಪ ಗುಳೇದ, ಬಾಳು ಗೌಡರ, ಮರಿಯಪ್ಪ ವರಗಾ, ದೇವಪ್ಪ ಮ್ಯಾಗೇರಿ, ಶರಣಪ್ಪ ದಿವಾನದ, ಮಲ್ಲಪ್ಪ ಮ್ಯಾಗೇರಿ, ದೇವರಾಜ ಕಟಗೇಲಿ, ನಾಗಪ್ಪ ಮ್ಯಾಗೇರಿ, ಮಲ್ಲಪ್ಪ ದಿವಾಣದ, ದೇವಪ್ಪ ತಾತಲ, ಮಲ್ಲು ಮ್ಯಾಗೇರಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement