ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ ಜಿಲ್ಲೆಯಲ್ಲಿ ಸೈಕ್ಲಿಂಗ್ ಜನಪ್ರಿಯವಾಗಿದೆ: ಶಂಕರ

Mainashree
Updated On : 31 Aug 2013, 10:26 am

ಗದಗ:  ಜಿಲ್ಲೆಯಲ್ಲಿ ರೇಸಲಿಂಗ್ ಹಾಗೂ ಸೈಕ್ಲಿಂಗ್ ಕ್ರೀಡಾಪಟುಗಳು ಹೆಚ್ಚಿದ್ದು, ಇದರಿಂದ ಗದಗ ಜಿಲ್ಲೆಯು ರೇಸಲಿಂಗ್ ಸೈಕ್ಲಿಂಗ್‌ನಲ್ಲಿ ಜನಪ್ರಿಯವಾಗಿದೆ ಎಂದು ಜಿಲ್ಲಾ ಕ್ರೀಡಾಧಿಕಾರಿ ಕೆ. ಶಂಕರ ಹೇಳಿದರು.
ಅವರು ಈಚೆಗೆ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಸೈಕ್ಲಿಂಗ್ ಕೋಚ್ ದೇಸಾಯಿ ಹಾಗೂ ರೇಸಲಿಂಗ್ ಕೋಚ್ ಶರಣಗೌಡ ಬೇಲೇರಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಗದುಗಿನ ಮಣ್ಣಿನಲ್ಲಿ ಹುಟ್ಟಿದ ಮಕ್ಕಳಿಗೆ ಕ್ರೀಡೆ ವರವಾಗಿದೆ. ಕಳೆದ ವರ್ಷ ಬೇಲೇರಿ ಅವರ ಕೈಯಲ್ಲಿ ಪಳಗಿದ ಮಕ್ಕಳು 9 ಚಿನ್ನದ ಪದಕ ಪಡೆದಿದ್ದಾರೆ.
ಇವರ ಬಳಿಯೇ ತರಬೇತಿ ಪಡೆದ ಪ್ರೇಮಾ ಹುಚ್ಚಣ್ಣವರ ವರ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆಯುವ ಮೂಲಕ ಗದುಗಿನ ಹೆಸರನ್ನು ವಿಶ್ವವಿಖ್ಯಾತಗೊಳಿಸಿದ್ದಾಳೆ ಎಂದರು.
ಸನ್ಮಾನ ಸ್ವೀಕರಿಸಿದ ಶರಣಗೌಡ ಬೇಲೇರಿ, ಗದಗ-ಧಾರವಾಡ ಈಶ್ವರಿಯ ವಿವಿಯ ಮುಖ್ಯ ಸಂಚಾಲಕಿ ಬ್ರಹ್ಮಕುಮಾರಿ ಜಯಂತಿ ಮಾತನಾಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement