ಪ್ರತಿಯೊಂದು ಕ್ಷಣವೂ ಅಮೂಲ್ಯ: ನವಲಗುಂದ
ಕನ್ನಡಪ್ರಭ ವಾರ್ತೆ, ಗದಗ, ಆ. 30
ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯ ಎಂದು ಪ್ರೊ. ಎಂ.ಎಂ. ನವಲಗುಂದ ಹೇಳಿದರು.
ಅವರು ಈಚೆಗೆ ನಗರದ ಕೆಎಲ್‌ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಬಿಬಿಎ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ನಮಗರಿವಿಲ್ಲದಂತೆ ಅದ್ಭುತ ವ್ಯಕ್ತಿತ್ವ ವಿಕಾಸಗೊಳ್ಳುತ್ತಲಿರುತ್ತದೆ. ಸಾಧನೆ ಮಾಡಬೇಕೆಂದುಕೊಂಡು ಯಾರೂ ಸಾಧನೆ ಮಾಡುವುದಿಲ್ಲ ಎಂದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಚೇರ್‌ಮನ್ ಪ್ರೊ. ಎಸ್.ಜೆ. ಹಿರೇಮಠರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಸ್. ಯಂಕಂಚಿಯವರು ಅಧ್ಯಕ್ಷತೆ ವಹಿಸಿದ್ದರು.
ಬಿಬಿಎ ಪ್ರಾಚಾರ್ಯ ಎಂ.ಬಿ. ಚನ್ನಪ್ಪಗೌಡರ ಸ್ವಾಗತಿಸಿದರು. ಶರಣ್ಯ, ಸುಧಾ, ಪಲ್ಲವಿ, ಅಶೋಕ, ರೋಹಿತ, ಮಂಜುನಾಥ ಮತ್ತಿತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪೂಜಾ ಕಟಿಗಾರ ವಂದಿಸಿದರು.