ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಗತ್ತನ್ನೇ ಬೆರಗುಗೊಳಿಸಿದ ವಿವೇಕಾನಂದ

Mainashree
Updated On : 1 Sept 2013, 11:31 am

ಲಕ್ಷ್ಮೇಶ್ವರ: ಜಗತ್ತನ್ನು ಭಾರತದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರದ್ದು, ಅವರ ನಡೆ, ಬದುಕು ಯಾವಾಗಲೂ ಸತ್ಯದ ಕಡೆಗೆ ಇತ್ತು ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದಾಶ್ರಮದ ತ್ಯಾಗೀಶ್ವರಾನಂದ ಶ್ರೀಗಳು ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ರಥಯಾತ್ರೆಯ ನಂತರ ತೋಂಟದ ದೇವರ ಮಠದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶ ಅಳವಡಿಸಿಕೊಂಡು ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಬೇಕು ಎಂದರು.  ಗದುಗಿನ ಸ್ವಾಮಿ ವಿವೇಕಾನಂದಾಶ್ರಮದ ನಿರ್ಭಯಾನಂದ ಶ್ರೀಗಳು ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅಜ್ಜಣ್ಣ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಎನ್.ಜಿ. ಹೊಂಬಳ ಮಾತನಾಡಿದರು.
ಹುಬ್ಬಳ್ಳಿಯ ಲಲಿತಾನಂದ ಶ್ರೀಗಳು, ಬಾಗಲಕೋಟೆಯ ಕೃಪಾಕರಾನಂದ ಶ್ರೀಗಳು, ಬಾಬುರಾವ್ ಕುಲಕರ್ಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಪುರಸಭೆಯ ಸದಸ್ಯರು ಹಾಗೂ ಪಟ್ಟಣದ ಗಣ್ಯರು ಹಾಜರಿದ್ದರು. ಡಾ. ವೈ.ಎಫ್. ಹಂಜಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಬಿಇಓ ಆರ್.ಎಸ್. ಬುರುಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement