ಶುಲ್ಕ ಮರು ಜಮಾಕ್ಕೆ ಧರಣಿ
ಹೊಳೆಆಲೂರ: ಸ್ಥಳೀಯ ಕಲ್ಮೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿಗೆ 2012-13ನೇ ಸಾಲಿನಲ್ಲಿ ತುಂಬಲಾಗಿದ್ದ ಬೋಧನಾ ಶುಲ್ಕ ಇಲ್ಲಿಯವರೆಗೂ ವಿದ್ಯಾರ್ಥಿಗಳ ಖಾತೆಗೆ ಮರು ಜಮಾ ಆಗದ ಕಾರಣ ಶುಕ್ರವಾರ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕಾಲೇಜಿನ ಪ್ರಧಾನ ಕಾರ್ಯದರ್ಶಿ ನೂರಜಾನ ನೀಲಗುಂದ ನೇತೃತ್ವದಲ್ಲಿ ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳು ಮೊದಲನೆ ಅವಧಿ ಮುಗಿಯುತ್ತಿದ್ದಂತೆ ಕಾಲೇಜಿನ ಮೈದಾನದಲ್ಲಿ ಕೆಲ ಕಾಲ ಶೀಘ್ರ ಹಣ ಮರು ಜಮಾ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ನಂತರ ಪ್ರಾಚಾರ್ಯರಿಗೆ ಮನವಿ ಅರ್ಪಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪ್ರಾಚಾರ್ಯ ಎಸ್.ಎಸ್. ಪಟ್ಟಣಶೆಟ್ಟಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿಯ ಕುರಿತು ತಿಳಿಸಿ ಶೀಘ್ರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.
ಕಾಲೇಜಿನ ಮಹಿಳಾ ಕಾರ್ಯದರ್ಶಿ ಪ್ರತಿಭಾ ವಕ್ಕುಂದ, ಎಂ.ಎಲ್. ಕಪ್ಪಲಿ, ಎನ್.ವಿ. ಯಾವಗಲ್‌ಮಠ, ರಷ್ಮಿ ಬಾರಕೇರ, ಪ್ರಿಯಾ ಕರಮುಡಿ, ಉಷಾ ಜಾಧವ, ವಿಶಾಲಾಕ್ಷಿ ಪರಸನಗೌಡರ, ಸೌಮ್ಯ ಮುಳಗುಂದ, ಆರ್.ಜಿ. ಯಲಿಗಾರ, ಕಲ್ಲಪ್ಪ ಸವಡಿ, ಎಂ.ಎಂ. ಬಡಿಗೇರ, ಷಣ್ಮುಕಪ್ಪ ಆವಾರಿ, ಬಸು ಪಿಡ್ರಾತರ, ಉಮೇಶ ಜಟ್ಟೆಪ್ಪನವರ, ಎಂ.ಎಚ್. ಸೋಮನಕಟ್ಟಿ, ಶಿವಕುಮಾರ ಚಿಂದಿ, ಪಿ.ಸಿ. ಕರಮುಡಿ, ಎಸ್.ಐ. ಮಣ್ಣೂರ ಮುಂತಾದವರು ಇದ್ದರು.