ಅಭಿವೃದ್ಧಿಗೆ ಕಲಾ ಪ್ರತಿಭೆ ಅಗತ್ಯ: ಯಡಳ್ಳಿ
ರೋಣ: ಮಕ್ಕಳು ಕೇವಲ ಓದು-ಬರದಲ್ಲಿ ಮುಂದಿದ್ದರೆ ಸಾಲದು. ಅದರೊಂದಿಗೆ ಸೃಜನಶೀಲತೆ, ಚಿಂತನಶೀಲತೆ, ಕ್ರಿಯಾತ್ಮಕತೆ ಮತ್ತು ಕಲಾ ಪ್ರತಿಭೆಯನ್ನು ಹೊಂದಿದಲ್ಲಿ ಸರ್ವಾಂಗೀಣ ಅಭಿವೃದ್ದಿಯಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಯಡಳ್ಳಿ ಹೇಳಿದರು.
ಅವರು ಬುಧವಾರ ರಾಜೀವ್ಗಾಂಧಿ ಶಿಕ್ಷಣ ಸಂಸ್ಥೆಯ ಬಸಮ್ಮ ಪಾಟೀಲ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ದಕ್ಷಿಣ ವಲಯ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವಿ.ಎಫ್. ಪಾಟೀಲ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಬಿ. ಹೊನ್ನವಾಡ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಕಲಾತ್ಮಕ ಪ್ರತಿಭೆಯನ್ನು ಹೊರ ಹಾಕಲು ನಡೆಸುವ ಸ್ಪರ್ಧೆಯು ವ್ಯಕ್ತಿ ನಿಷ್ಠವಾಗಿರದೇ, ವಸ್ತು ನಿಷ್ಠವಾಗಿರಬೇಕು. ನಿಜವಾದ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿ ಶಾಲೆಯ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದ ಮಾತನಾಡಿದರು. ಆರ್.ಕೆ. ಕೊಣ್ಣೂರ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್. ಕೋರಿ, ಪಿ.ಎಚ್. ತೋಟಗಂಟಿ, ಸಿ.ಬಿ. ರಡ್ಡೇರ ಇದ್ದರು. ಎ.ಕೆ. ಅಮರಗಟ್ಟಿ ಸ್ವಾಗತಿಸಿದರು. ಎಸ್.ಕೆ. ಜಕ್ಕಲಿ ನಿರೂಪಿಸಿದರು.