ಇಂದು ಕಾರ್ತಿಕ ದೀಪೋತ್ಸವ ಕಾರ್ಯಕ್ರಮ
ಲಕ್ಷ್ಮೇಶ್ವರ: ಪಟ್ಟಣದ ಪುರಾತನ ಮಠಗಳಲ್ಲಿ ಒಂದಾದ ಗಡ್ಡದೇವರಮಠದಲ್ಲಿ ಕಾರ್ತಿಕ ಮಾಸದ ಅಮವಾಸ್ಯೆ ದಿನದಂದು ಸೋಮವಾರ ಡಿ. 2ರಂದು ಸಂಜೆ 6ಕ್ಕೆ ವಿಶೇಷ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಮಠದ ಗುರುಪಾದಯ್ಯ ಗಡ್ಡದೇವರಮಠ ಹೇಳಿದರು.
ಶನಿವಾರ ಶ್ರೀಮಠದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾಳೆಹೊಸೂರಿನ ದಿಂಗಾಲೇಶ್ವರ ಮಠದ ಕುಮಾರ ದಿಂಗಾಲೇಶ್ವರ ಶ್ರೀಗಳು ಸಮಾರಂಭದ ಸಾನ್ನಿಧ್ಯ ವಹಿಸುವರು. ಶಾಸಕ ರಾಮಕೃಷ್ಣ ದೊಡ್ಡಮನಿ, ವಿಪ ಸದಸ್ಯ ನಾಗರಾಜ ಛಬ್ಬಿ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಲಿಂಬಯ್ಯಸ್ವಾಮಿ ಲಿಂಬಯ್ಯಸ್ವಾಮಿಮಠ, ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್.ಪಾಟೀಲ, ಕೆಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕ ಸುನೀಲ ಮಹಾಂತಶೆಟ್ಟರ, ಶಿವಣ್ಣ ನೆಲುವಿಗಿ, ಸುಭಾಷ ಓದುನವರ, ರಾಜೇಶ್ವರಿ ಪಾಟೀಲ, ವೀರಯ್ಯ ಮಠಪತಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಸಮಾರಂಭ ಜರುಗಲಿದೆ. ನಂತರ ಧಾರವಾಡದ ರಾಮು ಮೂಲಗಿ ಜಾನಪದ ಕಲಾ ತಂಡದಿಂದ ಜನಪದ ಹಾಡುಗಳ ಕಾರ್ಯಕ್ರಮವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಬಸಣ್ಣ ಬೆಂಡಿಗೇರಿ, ಗುರುಶಾಂತಯ್ಯ ಗಡ್ಡದೇವರಮಠ, ಈರಣ್ಣ ಅಂಕಲಕೋಟಿ, ಶಿವಜೋಗೆಪ್ಪ ಚೆಂದರಗಿ, ಗುರುಶಾಂತಯ್ಯ ಕೂಸನೂರಮಠ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ಆರ್.ಎಫ್. ಪುರಾಣಿಕಮಠ, ಇಬ್ರಾಹಿಂಸಾಬ ರಿತ್ತಿ, ವೆಂಕಟೇಶ ಮಾತಾಡೆ, ಹನುಮಂತಪ್ಪ ಗದ್ದಿ, ಎಚ್.ಬಿ. ಓದಾನವರ, ಮಹ್ಮದಗೌಸ ಇರಕಲ್ ಮುಂತಾದವರು ಹಾಜರಿದ್ದರು.