ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆಯಿಂದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ

Vishwanath S
Updated On : 2 Dec 2013, 11:58 am

ಮುಂಡರಗಿ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರ ಪಾಲಕಿ ಉತ್ಸವ, ಅಗ್ನಿ ಹಾಯುವುದು ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಡಿ. 3 ಹಾಗೂ 4 ರಂದು ಜರುಗಲಿದೆ. ಡಿ. 3 ರಂದು ಸಂಜೆ 4 ಗಂಟೆಗೆ ರುದ್ರಾರಾಧ್ಯಶಾಸ್ತ್ರಿ ಶಿಂಗಟಾಲೂರು ಹಿರೇಮಠ ನೇತೃತ್ವದಲ್ಲಿ ಪಾಲಕಿ ಉತ್ಸವ ಜರುಗಲಿದೆ. ಡಿ. 4 ರಂದು ಬೆಳಗ್ಗೆ 9ಕ್ಕೆ ಅಗ್ನಿ ಹಾಯುವ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ 12-25ಕ್ಕೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ಮಠದ ಶಾಂತಲಿಂಗೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಅಂದಪ್ಪ ಗೋಡಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಅಂದಪ್ಪ ಬೆಲ್ಲದ, ದೊಡ್ಡಬಸಣ್ಣ ಕಾಲವಾಡ, ಕರಬಸಪ್ಪ ಹಂಚಿನಾಳ, ವಾಸಣ್ಣ ಕುರುಡಗಿ, ಹೇಮಂತಗೌಡ ಪಾಟೀಲ, ಧ್ರುವಕುಮಾರ ಹೊಸಮನಿ ಆಗಮಿಸುವರು. ವೈ.ಎನ್. ಗೌಡರ ಅತಿಥಿ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಪಂಡಿತ ರುದ್ರಾರಾಧ್ಯಶಾಸ್ತ್ರಿಗಳು ಶಿಂಗಟಾಲೂರು ಹಿರೇಮಠ ಇವರು ಬರೆದಿರುವ ಚತುರ್ಥಪುಷ್ಪ ನೂತನ ಗೃಹಪ್ರವೇಶ ಗ್ರಂಥವನ್ನು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಬಿಡುಗಡೆಗೊಳಿಸಲಿದ್ದಾರೆ. ನಂತರ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಪಾಟೀಲ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಗುವುದು ಎಂದು ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಬಿಸನಳ್ಳಿ, ಕಾರ್ಯದರ್ಶಿ ಆರ್.ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement