ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸ್ವಾಭಿಮಾನಿ ದೃಷ್ಟಿ ಬೆಳೆಸಿದ ರಾಜೀವ್ ದಿಕ್ಷೀತ್

Vishwanath S
Updated On : 2 Dec 2013, 11:59 am

ಗದಗ: ವಿದೇಶಿ ವ್ಯಾಮೋಹ, ಅಂಧಾನುಕರಣೆ ತೈಜಿಸಿ ಸ್ವಾಭಿಮಾನಿ ದೃಷ್ಟಿ ಬೆಳೆಸುವ ನಿಟ್ಟಿನಲ್ಲಿ ರಾಜೀವ ದಿಕ್ಷೀತ್ ಯಶಸ್ವಿಯಾದದ್ದು ಆಂದೋಲನಗಳ ಸಂಘಟನೆಗಳಿಗೆ ಅನುವಾಗಿದೆ ಎಂದು ಸಾಹಿತಿ, ಪರಿಸರ ಹೋರಾಟಗಾರ ರವೀಂದ್ರ ಕೊಪ್ಪರ ಅಭಿಪ್ರಾಯಪಟ್ಟರು.
ಅವರು ಶನಿವಾರ ನಗರದ ಭೂಮರಡ್ಡಿ ವೃತ್ತದ ಹತ್ತಿರದ ಪತಂಜಲಿ ಚಿಕಿತ್ಸಾಲಯದಲ್ಲಿ ಪತಂಜಲಿ ಚಿಕಾತ್ಸಾಲಯ ಆಯೋಜಿಸಿದ್ದ ರಾಜೀವ್ ದಿಕ್ಷೀತ್ ಅವರ 46ನೇ ಜಯಂತ್ಯುತ್ಸವ ಹಾಗೂ 3ನೇ ವರ್ಷದ ಪುಣ್ಯತಿಥಿ ಅಂಗವಾಗಿ ನೆನಹು ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮತನ ಗುರುತಿಸುವುದೇ ಸ್ವದೇಶಿ ಅಂದೋಲನದ ನಿಜವಾದ ಗುರಿ ಎಂದು ತಿಳಿದಿದ್ದ ದಿಕ್ಷೀತ್, ವಸಹಾತುದಾರರ ಕರಿ ಛಾಯೆಯಿಂದ ಹೊರಬಂದು ನಿಜವಾದ ಸ್ವಾತಂತ್ರ್ಯವನ್ನು ಪಡೆಯುವುದು, ವಿದೇಶಿ ವಿನಿಮಯ ಉಳಿಸುವುದರಿಂದ ರಾಷ್ಟ್ರವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮಾತ್ರವಲ್ಲದೇ ವಿದೇಶಿ ಕಂಪನಿಗಳ ಅನುಭೋಗಿ ಸರಕುಗಳಿಂದಾಗುತ್ತಿರುವ ಆರೋಗ್ಯದ ಹಾನಿ ಹಾಗೂ ನಮ್ಮ ಮಾನಸಿಕತೆಯ ಮೇಲಾಗುತ್ತಿರುವ ದೂರಗಾಮಿ ಅಪಾಯಗಳನ್ನು ತಪ್ಪಿಸುವಂತೆ ವ್ಯಾಪಕವಾಗಿ ಜನಜಾಗೃತಿ ಮಾಡುತ್ತಾ ನಮ್ಮ ಸರ್ಕಾರ ಮಾಡುತ್ತಿರುವ ಅಪಚಾರಗಳನ್ನು ಜನಮನಕ್ಕೆ ಅರಿಕೆ ಮಾಡಿಕೊಟ್ಟಿದ್ದು ರಾಜೀವರ ಮಹತ್ತರ ಸಾಧನೆ ಎಂದರು. ಸಾನ್ನಿಧ್ಯವಹಿಸಿದ್ದ ರೋಣ ಗುಲಗಂಜಿ ಮಠದ ಗುರುಪಾದದೇವರು ಮಾತನಾಡಿದರು. ವಿದ್ಯಾದಾನ ಸಮಿತಿ ಕಾಲೇಜಿನ ಉಪನ್ಯಾಸಕ ದತ್ತಪ್ರಸನ್ನ ಪಾಟೀಲ ಅವರು ರಾಜೀವ ದಿಕ್ಷೀತ್‌ರ ಕುರಿತು ಉಪನ್ಯಾಸ ನೀಡಿದರು.  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ ಗುರುಗಳನ್ನು ಸನ್ಮಾನಿಸಲಾಯಿತು.  ಪ್ರವೀಣ ಬನ್ಸಾಲಿ, ನೀಲಪ್ಪಗೌಡ ದಾನಪ್ಪಗೌಡ್ರ, ಜಸ್ವಿರ್‌ಸಿಂಗ್ ಕೌಸಾಲ, ಎಂ.ಡಿ. ಪಾಟಿಲ, ಐ.ವೈ. ಅಂಗಡಿ, ವಿಶ್ವನಾಥ ಶೀರಿ, ಗಿರೀಶ ಪಂಥರ, ಆನಂದ ಶೇಠ, ಪ್ರಶಾಂತ ಪಾಲನಕರ, ಮಂಜುನಾಥ ಪೋತ್ನೆಕಲ್, ಭೀಮಣ್ಣ ಸತ್ಯಪ್ಪನವರ, ಮಹೇಶ ರೋಖಡೆ, ಡಾ. ಐಹೊಳೆ, ಅಶೋಕ ಕುಲಕರ್ಣಿ, ಡಾ. ಮತ್ತಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು. ಪದ್ಮಾವತಿ ಮರಿಬಸಣ್ಣವರ ಪ್ರಾರ್ಥಿಸಿದರು. ಗಿರೀಶ ಪಂಥರ ಸ್ವಾಗತಿಸಿದರು. ಸುಮಾ ಕರಿಗಾರ ನಿರೂಪಿಸಿದರು. ದೀಪಾ ಪೂಜಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement