ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ಕಳ್ಳತನ

Vishwanath S
Updated On : 3 Dec 2013, 11:01 am

ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮದ ಹಿಂದುಳಿದ ಸಮುದಾಯ ಮಕ್ಕಳು ವಾಸಿಸುವ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಬಳಸುವ ಸಿಮೆಂಟ್ ಚೀಲ ಕಳವು ಮಾಡಿರುವ ಕಳ್ಳನು ವಸತಿ ನಿಲಯ ಬಾಲಕರಿಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್‌ಎಫ್‌ಐ, ಕರವೇ, ಕಾರ್ಯಕರ್ತರು, ಆತಂಕಕ್ಕೊಳಗಾದ ಹಾಸ್ಟೆಲ್ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಭೀಮಾಂಬಿಕೆ ಓಣಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಬೆಳಗ್ಗೆ 5ಕ್ಕೆ ಶಿವಪ್ಪ ಭೂಮದ ಸಿಮೆಂಟ್ ಕಳ್ಳತಕ್ಕೆ ಬಂದಿದ್ದಾನೆ. ವಸತಿ ನಿಲಯ ಕೊಠಡಿಯಲ್ಲಿ ಇಡಲಾದ ಸಿಮೆಂಟ್ ತೆಗೆದುಕೊಂಡು ಹೋಗುವಾಗ ಇದೇ ವಸತಿ ನಿಲಯದ ವಿದ್ಯಾರ್ಥಿ ಮಂಜುನಾಥ ಮೂರಮನಿ ಎಂಬುವನಿಗೆ ಎಚ್ಚರವಾಗಿದೆ. ಇದನ್ನು ಪ್ರಶ್ನಿಸಿದಕ್ಕೆ ಅವನಿಗೆ ಗದರಿಸಿ ಅವನ ಮೇಲೆ ಗಾದಿಯನ್ನು ಎಸೆದು ಕಳ್ಳನು ಪರಾರಿಯಾಗಿದ್ದಾನೆ. ಹೋಗುವಾಗ ಇದೇ ವಸತಿ ನಿಲಯದ 10ನೇ ತರಗತಿ ವಿದ್ಯಾರ್ಥಿ ಅಮರೇಶನನ್ನು ಹೆದರಿಸಿ ಅವನ ಸೈಕಲ್ ಪಡೆದು ಸಿಮೆಂಟ್ ತೆಗೆದುಕೊಂಡು ಹೋಗಿದ್ದಾನೆ. ಬೆಳಗ್ಗೆ ಗ್ರಾಮದ ಕೆಲ ಹಿರಿಯರು ಸೇರಿ ಕಳ್ಳನಿಂದ ಮರಳಿ ಸಿಮೆಂಟ್ ಪಡೆದಿದ್ದಾರೆ. ಈ ಘಟನೆಯಲ್ಲಿ ಏನಾದರೂ ಅಹಿತಕರ ಘಟನೆ ನಡೆದಿದ್ದರೆ ಯಾರು ಹೊಣೆಗಾರರು ಎಂದು ಪ್ರತಿಭಟನಾ ನಿರತರು ಪ್ರಶ್ನಿಸಿದರು. ಇದಕ್ಕೂ ಮೊದಲು ಕಳ್ಳನು ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿಗಳಿಗೆ, ಅಡುಗೆ ಸಿಬ್ಬಂದಿಗೆ ಹೆದರಿಸಿ ಹೋಗುತ್ತಿದ್ದನು ಎಂದು ವಿದ್ಯಾರ್ಥಿಗಳು ಸಂಘಟನೆ ಎದುರು ತಮ್ಮ ನೋವು ತಿಳಿಸಿದರು.
ಇಂತಹ ದುಷ್ಕೃತ್ಯ ಮಾಡಿರುವ ಆರೋಪಿಗೆ ಶಿಕ್ಷೆಯಾಗಬೇಕು. ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಶರಣಪ್ಪ ಪೂಜಾರ, ಗ್ರಾಪಂ ಮಾಜಿ ಸದಸ್ಯ ಕಳಕಪ್ಪ ಹಲಗಿ, ಎಸ್‌ಎಫ್‌ಐ ಮುಖಂಡ ಕಳಕೇಶ ಉಕ್ಕಿಸಲದ, ಮೂಕಪ್ಪ ಹಲಗಿ, ಕಳಕಪ್ಪ ಜಾಡಬಂಡಿ, ಇರಪ್ಪ ಹಲಗಿ, ಯಮನೂರ ಸಾಬ ಮುಜಾವರ, ಶಂಕ್ರಪ್ಪ ಹಾದಿಮನಿ, ಅಲ್ಲಾಭಕ್ಷಿ ಮುಕ್ಷಾವಲಿ, ಹನುಮಂತಪ್ಪ ಬಣಕಾರ, ಶಿವವ್ವ ಹಲಗಿ, ಮುತ್ತಪ್ಪ ಲಕ್ಕಲಕಟ್ಟಿ, ಶರಣಪ್ಪ ಹಲಗಿ, ಭರಮಪ್ಪ ಹಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement