ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

8ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Lingaraj Badiger
Updated On : 4 Dec 2013, 11:57 am

ಗದಗ: ಪಂ. ಸಿದ್ಧಲಿಂಗ ಶಾಸ್ತ್ರಿಗಳು ಹೊಸಮಠ ಅವರ 19ನೇ ಪುಣ್ಯಸ್ಮರಣೆ ಮತ್ತು ಸುಮಿತ್ರಮ್ಮ ಹೊಸಮಠ, ತೋಂಟದಾರ್ಯ ಜಯಮ್ಮ ಹೊಸಮಠ ಇವರ ಅಮೃತೋತ್ಸವ ಅಂಗವಾಗಿ ಸಿದ್ಧಲಿಂಗಯ್ಯ ಶಾಸ್ತ್ರಿಗಳು ಹೊಸಮಠ ಪುಣ್ಯಸ್ಮರಣೆ ಟ್ರಸ್ಟ್ ಬೂದಿಹಾಳ-ಗದಗ ವತಿಯಿಂದ ಡಿ. 8ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಡಿ. 9ರಂದು ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮಹಾಂತೇಶ ಹೊಸಮಠ ಹೇಳಿದರು. ಅವರು ಮಂಗಳವಾರ ಸಂಜೆ ನಗರದ ಜ. ತೋಂಟದಾರ್ಯ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಜ. ತೋಂಟದಾರ್ಯ ಸಂಸ್ಥಾನ ಮಠದ ಆವರಣದಲ್ಲಿರುವ ಬಸವೇಶ್ವರ ಕಾಲೇಜಿನಲ್ಲಿ ಡಿ. 8ರಂದು ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜರುಗಲಿದೆ. ಶಿಬಿರದಲ್ಲಿ ಗದಗ, ಹುಬ್ಬಳ್ಳಿ, ಧಾರವಾಡ, ಬೆಂಗಳೂರಿನ ಕೀಲು ಮತ್ತು ಮೂಳೆ, ಚರ್ಮರೋಗ, ಮನೋರೋಗ, ಕಿವಿ, ಮೂಗು, ಗಂಟಲು, ನೇತ್ರ ತಪಾಸಣೆ, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ತಪಾಸಣೆ ನಡೆಸಲಿದ್ದಾರೆ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಐ.ಎಂ.ಎ. ಅಧ್ಯಕ್ಷ ಡಾ. ಆರ್.ಎನ್.ಪಾಟೀಲ ಹಾಗೂ ಡಾ. ಎನ್.ಬಿ. ಪಾಟೀಲ ನೇತೃತ್ವದಲ್ಲಿ ಶಿಬಿರ ಜರುಗಲಿದೆ.
ಈ ಸಂದರ್ಭದಲ್ಲಿ ರೋಗಿಗಳಿಗೆ ಔಷಧಿ ವಿತರಿಸುವ ಯೋಜನೆಯೂ ಸಹ ಚಿಂತನೆಯಲ್ಲಿದೆ. ಹೆಚ್ಚಿನ ತಪಾಸಣೆಗೆ ಅವಶ್ಯಕತೆ ಬಿದ್ದಲ್ಲಿ ಬೇಕಾದ ಸಹಾಯ ಸೌಲಭ್ಯ ಒದಗಿಸಲು ಟ್ರಸ್ಟ್ ಸನ್ನದ್ಧವಾಗಿದೆ. ಡಿ. 9ರಂದು ಸಂಜೆ 7.30 ಕ್ಕೆ ಜ. ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಜರುಗುವ ಲಿಂಗಾಯತ ಪ್ರಗತಿಶೀಲ ಸಂಘದ 2149ನೇ ಶಿವಾನುಭವ ಕಾರ್ಯಕ್ರಮದಲ್ಲಿ ಚಿಂಚಣಿ ಸಂಸ್ಥಾನಮಠದ ಅಲ್ಲಮಪ್ರಭು ಶ್ರೀಗಳು, ಸಂಡೂರು ಸಂಸ್ಥಾನಮಠದ ಪ್ರಭುಸ್ವಾಮಿಗಳು, ಅರಸಿಕೇರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಶ್ರೀಗಳ ಉಪಸ್ಥಿತಿಯಲ್ಲಿ ಸಿದ್ಧಲಿಂಗ ಶಾಸ್ತ್ರಿಗಳ 19ನೇ ವರ್ಷದ ಪುಣ್ಯಸ್ಮರಣೆ ಹಾಗೂ ಅಮೃತೋತ್ಸವ ಕಾರ್ಯಕ್ರಮದ ಅಂಗವಾಗಿ ಕೊಡೇಕಲ್ ರಾಚಪಯ್ಯ ಒಂದು ಅಧ್ಯಯನ ಪುಸ್ತಕ ಬಿಡುಗಡೆ ಜರುಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಪ್ರಕಾಶ ಕರಿಸೋಮನಗೌಡ್ರ, ಡಾ. ಎನ್.ಬಿ. ಪಾಟೀಲ, ಡಾ. ಆರ್.ಎನ್.ಪಾಟೀಲ, ಡಾ. ನಾಗರಾಜ ಹೊಸಮನಿ, ಡಾ. ಬಿ.ಎಂ. ಆಲೂರ, ಎಸ್.ಎನ್.ಆದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement