ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ-ವಾಡಿ ರೈಲು ಹೋರಾಟಕ್ಕೆ ಸಿದ್ಧ

Lingaraj Badiger
Updated On : 4 Dec 2013, 11:36 am

ನರೇಗಲ್ಲ: ಗದಗ-ವಾಡಿ ರೈಲು ಮಾರ್ಗ ನಮ್ಮ ರೋಣ ಕ್ಷೇತ್ರದ ಮೂಲಕ ಹಾಯ್ದು ಹೋಗುವಂತಾದರೆ ಈ ಸಂಬಂಧ ಯಾವುದೇ ಹೋರಾಟಕ್ಕೂ ತಮ್ಮ ಸಂಪೂರ್ಣ ಬೆಂಬಲವಿದೆ ಮತ್ತು ಅದರ ನೇತೃತ್ವವನ್ನು ವಹಿಸಿಕೊಳ್ಳಲು ತಾವು ಸಿದ್ಧರಿರುವುದಾಗಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಭಾನುವಾರ ಅನ್ನದಾನೀಶ್ವರ ಪಪೂ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲು ಈ ಮಾರ್ಗ ಕಣಗಿನಹಾಳ, ಕೋಟುಮಚಗಿ, ನರೇಗಲ್ಲ, ನಿಡಗುಂದಿ, ಗಜೇಂದ್ರಗಡ, ಹನುಮಸಾಗರ, ಇಳಕಲ್ ಮೂಲಕ ಸಾಗಬೇಕೆಂಬ ಸಮೀಕ್ಷೆಯಾಗಿತ್ತು ಎಂಬುದು ಕೆಲ ಜನರು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಅಧಿಕೃತ ದಾಖಲೆ ಬೇಕು. ಕೇವಲ ನರೇಗಲ್ಲ, ಗಜೇಂದ್ರಗಡದವರು ಹೀಗೆ ತುಂಡು ತುಂಡಾಗಿ ಹೋರಾಟ ಸಮಿತಿಗಳನ್ನು ಮಾಡಿಕೊಂಡು ಅರ್ಜಿ ಸಲ್ಲಿಸುತ್ತ ಕುಳಿತರೆ ಏನೂ ಉಪಯೋಗವಾಗುವುದಿಲ್ಲ. ಬದಲಾಗಿ ಈ ರೈಲು ಮಾರ್ಗ ಹಾದು ಹೋಗುವ ಎಲ್ಲ ಗ್ರಾಮಗಳ ಜನ ಒಟ್ಟಾಗಿ ಹೋರಾಟಕ್ಕಿಳಿಯಬೇಕು. ಆದರೆ ಈಗಾಗಲೇ ಈ ಕಾರ್ಯ ಬಹಳಷ್ಟು ತಡವಾಗಿದೆ ಎಂಬುದು ನನ್ನ ಅಭಿಪ್ರಾಯ.
ಈಗ ಈ ಮಾರ್ಗವು ಗದಗ, ಭಾಣಾಪುರ, ಕುಕನೂರು, ಯಲಬುರ್ಗಾ ಮಾರ್ಗವಾಗಿ ಬದಲಾಗಿದೆ ಎಂಬುದನ್ನು ಕೇಳಿದ್ದೇನೆ. ಮೊದಲಿನ ಸಮೀಕ್ಷೆಯ ಬಗೆಗಿನ ದಾಖಲೆಗಳನ್ನು ಮೊದಲು ಸಂಗ್ರಹಿಸಬೇಕು. ಅದಕ್ಕಾಗಿ ಹೋರಾಟ ಸಮಿತಿಯ ಸದಸ್ಯರುಗಳು ತಮ್ಮೊಂದಿಗೆ ಕೈ ಜೋಡಿಸಿದರೆ ತಾವು ಖಂಡಿತ ಎಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ವಿ.ಆರ್. ಗುಡಿಸಾಗರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement