ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳು ಶಿಕ್ಷಣ ವಂಚಿತರಾಗದಿರಲಿ: ಜಂಗಣ್ಣವರ

Lingaraj Badiger
Updated On : 4 Dec 2013, 11:55 am

ಹೊಳೆಆಲೂರ: ಓದುವ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೆ, ಇತರೆ ಕಾರ್ಯಗಳಲ್ಲಿ ತೊಡಗಿಸುವ ಪಾಲಕರು ಮಕ್ಕಳ ಶಿಕ್ಷಣ ಕುಂಠಿತಗೊಳ್ಳಲು ನೇರ ಕಾರಣವಾಗುತ್ತಿದ್ದಾರೆ ಎಂದು ಬೆನಹಾಳ ಗ್ರಾಮದ ಸಿ.ಬಿ. ಪಾಟೀಲ ಸರ್ಕಾರಿ ಪ್ರೌಢ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಬಿ. ಜಂಗಣ್ಣವರ ಹೇಳಿದರು. ಅವರು ಸೋಮವಾರ ಹೊಳೆಆಲೂರ ಸಮೀಪದ ಬಸರಕೋಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹುನಗುಂಡಿ ಗ್ರಾಮದಲ್ಲಿ ನಡೆದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯ ಮತ್ತು ಕೋಲಾಟ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿವಿತರಿಸಿ ಮಾತನಾಡಿದರು.  ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಾಗಿರುತ್ತದೆ. ತಾತ್ಪೂರ್ತಿಕ ಕೆಲಸಕ್ಕಾಗಿ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಿಮುಖರಾಗಿಸಿ ಅವರ ಭವಿಷ್ಯತ್ತಿನ ಜೀವನ ಕತ್ತಲಾಗಿಸುವಂತೆ ಮಾಡಬೇಡಿ. ಸರ್ಕಾರ ಸಾಕಷ್ಟು ಸವಲತ್ತು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಉತ್ತಮ ಪ್ರತಿಭಾವಂತ ಶಿಕ್ಷಕರು ಈ ಶಾಲೆಯಲ್ಲಿದ್ದು, ನಿಮ್ಮ ಮಕ್ಕಳ ಪ್ರತಿಭೆ ಹೊರತರಲು, ವಿದ್ಯಾವಂತರಾಗಲು ಶ್ರಮಿಸುತ್ತಿದ್ದಾರೆ. ಅವರ ಭವಿಷ್ಯ ರೂಪಿಸುವ ಗುರುಗಳಿಗೆ ನೀವೂ ಸಹಕರಿಸಿ ಎಂದರು. ಬಾಳಪ್ಪ ಸೂಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ರಂಗಪ್ಪ ಜೊಂಡಿ, ಹವಳಪ್ಪ ಮಾದರ, ಹುಸೇನಸಾಬ್ ಮನಿಯಾರ, ಈರಪ್ಪ ಮಾದರ, ಶಬಾನಾ ಪಾಟೀಲ, ಮಹದೇವಪ್ಪ ಪೂಜಾರ, ಎಫ್.ಬಿ. ಭೀಮನಗೌಡರ, ಪರಸಪ್ಪ ಮಾದರ, ಬಾಬುಸಾಬ್ ಚೋಪದಾರ, ಹನುಮಪ್ಪ ಬದಾಮಿ, ಎಸ್.ಆರ್. ಪೂಜಾರ ಮುಂತಾದವರು ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ಬಿ.ವೈ. ಗಾಣಿಗೇರ ಸ್ವಾಗತಿಸಿದರು. ಕೆ.ಬಿ. ಪಾಟೀಲ ನಿರೂಪಿಸಿದರು. ಎಂ.ಪಿ. ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement